ಬಡಗನ್ನೂರು : ಪಡುಮಲೆ ಕೂವೆ ಶಾಸ್ತಾರ ಶ್ರೀ ವಿಷ್ಣುಮೂರ್ತಿ ದೇವ ಸ್ಥಾನದ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಪೂರ್ವಭಾವಿ ಸಭೆಯು ಕ್ಷೇತ್ರದ ವಠಾರದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸಂಜೀವ ರೈ ಕೆ.ಪಿ. ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಜೀವ ರೈ ಕೆ.ಪಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 33 ವರ್ಷಗಳ ಹಿಂದೆ ಬ್ರಹ್ಮಕಲಶೋತ್ಸವ ನೇರವೇರಿತ್ತು. ಪ್ರಸ್ತುತ ದೇವಸ್ಥಾನ ತೀರಾ ಜೀರ್ಣಾವಸ್ಥೆಯಲ್ಲಿದೆ. ಜೀರ್ಣೋ ದ್ಧಾರದ ಬಗ್ಗೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವಂತೆ ಅವರು ಕೋರಿದರು.
ಅಷ್ಟಮಂಗಲ ಚಿಂತನೆ
ಹಲವಾರು ಭಕ್ತರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಚರ್ಚಿಸಿ ಕೊನೆಯಲ್ಲಿ ದೈವಜ್ಞರಾದ ಮಧೂರು ಕೃಷ್ಣ ಭಟ್, ರಂಗ ಭಟ್, ಬೈಲೂರು ಮುರಲೀಧರ ತಂತ್ರಿಯವರಿಂದ ಅಷ್ಟಮಂಗಲ ಪ್ರಶ್ನಾ ಚಿಂತನೆಯನ್ನು ನ. 4ರಿಂದ ನಡೆಸುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಗೌಡ ಕನ್ನಾಯ, ಗಣೇಶ್ ಭಟ್ ಬೀರ್ನೋಡಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಸಿ. ಪಾಟಾಳಿ, ಜಯಪ್ರಕಾಶ್ ರೈ ನೂಜಿಬೈಲು, ಹಿರಿಯರಾದ ಬಾಬು ರೈ ಮೂಡಾಯೂರು, ವ್ಯವಸ್ಥಾಪನ ಸಮಿತಿ ಸದಸ್ಯರಾದ ಗೋಪಾಲಕೃಷ್ಣ ಸುಳ್ಯಪದವು, ವಿಜಯ ಸೋಣಂಗೇರಿ, ವಿಷ್ಣು ಭಟ್ ಪಾದಕರ್ಯ, ಪದ್ಮಾವತಿ, ಶೋಭಾ, ಅರ್ಚಕ ಮಹಾಲಿಂಗ ಭಟ್, ಹಾಗೂ ಭಕ್ತರು ಉಪಸ್ಥಿತರಿದ್ದರು.
ಶಿಕ್ಷಕ ಉದಯ ಕುಮಾರ್ ಶರವು ಅವರು ಸ್ವಾಗತಿಸಿದರು. ದೇವಿಪ್ರಸಾದ್ ಕೆ.ಸಿ. ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.