Home ಧಾರ್ಮಿಕ ಸುದ್ದಿ ಪಡುಮಲೆ: ವಿಜೃಂಭಣೆಯ ಬ್ರಹ್ಮಕಲಶ

ಪಡುಮಲೆ: ವಿಜೃಂಭಣೆಯ ಬ್ರಹ್ಮಕಲಶ

1964
0
SHARE

ಬಡಗನ್ನೂರು ಫೆ. 24: ಪಡುಮಲೆ ಶ್ರೀ ಪೂಮಾಣಿ -ಕಿನ್ನಿಮಾಣಿ ದೈವಸ್ಥಾನ ಮತ್ತು ವ್ಯಾಘ್ರ ಚಾಮುಂಡಿ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಶನಿವಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮಹಾಗಣಪತಿ ಹೋಮ, ಖನನಾದಿ ಸ್ಥಳ ಶುದ್ಧಿ, ಬಿಂಬ ಶುದ್ಧಿ, ಅನುಜ್ಞಾಕಲಶ ಪೂಜೆ, ಅಭಿಷೇಕ, ಪ್ರಾಯಶ್ಚಿತ್ತ ಹೋಮ, ಶಾಂತಿಹೋಮ, ಮಂಟಪ ಸಂಸ್ಕಾರ, ಕುಂಭೇಶ ಕರ್ಕರೀ ಪೂಜೆ, ಬ್ರಹ್ಮಕಲಶ ಪೂಜೆ, ಮಧ್ಯಾಹ್ನ ಶಯ್ನಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ದುರ್ಗಾಪೂಜೆ, ಅಧಿವಾಸ ಹೋಮ, ಧ್ಯಾನಾಧಿವಾಸ, ಮಹಾಪೂಜೆ, ಪ್ರಸಾದ ವಿತರಣೆ ನಡೆದವು. ಕಾರ್ಕಳ ಗಾನಲಹರಿ ಕಲಾ ತಂಡದ ಸಂಗೀತ ರಸಮಂಜರಿ, ಯಕ್ಷ -ಗಾನವೈಭವ, ರಾತ್ರಿ ಶಾರದಾ ಕಲಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್‌
ಮಂಜೇಶ್ವರ ಅಭಿನಯಿಸುವ ನವೀನ್‌ ಡಿ ಪಡೀಲ್‌ ನಿರ್ದೇಶನದ ಅಂಚಗೆ -ಇಂಚಗೆ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

ಅಚ್ಚುಕಟ್ಟಿನ ವ್ಯವಸ್ಥೆ ಸಮಿತಿಗಳ ಕಾರ್ಯಕರ್ತರ ಶ್ರಮದಿಂದಾಗಿ ಎಲ್ಲೆಲ್ಲೂ ಅಚ್ಚುಕಟ್ಟಿನ ವ್ಯವಸ್ಥೆ ಆಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ. ಊಟೋಪಚಾರದಿಂದ ಹಿಡಿದು ಎಲ್ಲಾ ವ್ಯವಸ್ಥೆಗಳಲ್ಲಿ ಶಿಸ್ತು, ಸ್ವತ್ಛತೆಗೆ ವಿಶೇಷವಾದ ಆದ್ಯತೆಯನ್ನು ನೀಡಲಾಗಿದೆ.

ಇಂದು ಪ್ರತಿಷ್ಠೆ
ಫೆ. 25ರಂದು ಮುಂಜಾನೆಯಿಂದ ಮಹಾಗಣಪತಿ ಹೋಮ, 8.25ರ ಮೀನ ಲಗ್ನ ಶುಭ ಮುಹೂರ್ತದಲ್ಲಿ ಪೂಮಾಣಿ -ಕಿನ್ನಿಮಾಣಿ ದೈವಗಳ ಪ್ರತಿಷ್ಠೆ, ವ್ಯಾಘ್ರ ಚಾಮುಂಡಿ ದೈವದ ಪ್ರತಿಷ್ಠೆ ಮತ್ತು ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ ತಂಬಿಲ ಸೇವೆ, ಮಹಾಮಂಗಳಾರತಿ, ವೈದಿಕ ಮಂತ್ರಾಕ್ಷತೆ, ಪ್ರಾಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
ಪೂರ್ವಾಹ್ನ ಜನಪ್ರತಿನಿಧಿಗಳು, ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ, ಸಂಜೆ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಸರ್ವಧರ್ಮ ಸಭೆ ನಡೆಯಲಿದೆ.

LEAVE A REPLY

Please enter your comment!
Please enter your name here