ಬಡಗನ್ನೂರು : ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದ ಜಾತ್ರೆ ಅಂಗವಾಗಿ ಜ. 3ರಂದು ಪ್ರಗತಿಪರ ಕೃಷಿಕ ಕೃಷ್ಣ ರೈ ಕುದಾRಡಿ ಅವರ ತೋಟದಲ್ಲಿ ಲಕ್ಷ್ಮೀನಾರಾಯಣ ರಾವ್ ನೇತೃತ್ವದಲ್ಲಿ ಗೊನೆ ಮುಹೂರ್ತ ಮಾಡಲಾಯಿತು.
ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಂಜೀವ ರೈ ಕೆ.ಪಿ., ಸದಸ್ಯರಾದ ವಿಷ್ಣು ಭಟ್ ಪಾದೆಕರ್ಯ, ಕೇಶವ ಗೌಡ ಕನ್ನಯ, ಶೋಭಾ ತ್ಯಾಂಪಣ್ಣ, ಪದ್ಮಾವತಿ ಮುಡಿಪಿನಡ್ಕ, ವಿಜಯ ಕುಮಾರ್ ಸೋಣಗೇರಿ, ಅರ್ಚಕ ಮಹಾಲಿಂಗ ಭಟ್, ಕಾರ್ಯದರ್ಶಿ ತ್ಯಾಂಪಣ್ಣ ಸಿ.ಎಚ್., ಸ್ಥಳೀಯರಾದ ಜಯರಾಜ್ ಶೆಟ್ಟಿ ಅಣಿಲೆ, ಕೃಷ್ಣ ಮೂಲ್ಯ ಪೈರುಪುಣಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.