ಬಡಗನ್ನೂರು : ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದ ವರ್ಷಾವಧಿ ಜಾತ್ರೆಯ ಅಂಗವಾಗಿ ಜ. 13ರ ಪೂರ್ವಾಹ್ನ 8.30ಕ್ಕೆ ಮಹಾಗಣಪತಿ ಹೋಮ ತುಲಾಭಾರ ಸೇವೆ, ಮಹಾಪೂಜೆ, ಮೂರ್ತಿ ಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಆಡಳಿತ ಮೊಕ್ತೇಸರ ಸಂಜೀವ ರೈ ಕೆ.ಪಿ., ಪವಿತ್ರಪಾಣಿ ಕೇಶವ ಭಟ್, ಅರ್ಚಕ ಮಹಾಲಿಂಗ ಭಟ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಗೋಪಾಲಕೃಷ್ಣ ಸುಳ್ಯಪದವು, ಕೇಶವ ಗೌಡ ಕನ್ನಯ, ವಿಷ್ಣು ಭಟ್ ಪಾದೆಕರ್ಯ, ಪದ್ಮಾವತಿ, ಮುಡಿಪಿನಡ್ಕ, ಶೋಭಾ ಪೈರ್ಪುಣಿ, ಗುರುಪ್ರಸಾದ್ ರೈ ಕುತ್ಯಾಡಿ, ವಿಜಯ ಕುಮಾರ್ ಸೋಣಂಗೇರಿ, ಶ್ರೀ ಪೂಮಾಣಿ- ಕಿನ್ನಿಮಾಣಿ ದೈವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವಿರಾಜ ಶೆಟ್ಟಿ ಅಣಿಲೆ, ರವಿರಾಜ ರೈ ಸಜಂಕಾಡಿ, ಜಯರಾಜ್ ಶೆಟ್ಟಿ ಅಣಿಲೆ, ಕೆ.ಸಿ. ಪಡುಮಲೆ, ಸುಧಾಕರ ಶೆಟ್ಟಿ ಮಂಗಳಾ ದೇವಿ, ರಾಮಣ್ಣ ಗೌಡ ಬಸವನ ಹಿತ್ತಿಲು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.