ಕಾಪು: ಸುಸಂಸ್ಕೃತ ವ್ಯಕ್ತಿಯ ನಿರ್ಮಾಣವಾದಲ್ಲಿ ಮಾತ್ರ ಸುಸಂಸ್ಕೃತ ಸಮಾಜದ ನಿರ್ಮಾಣ ಸಾಧ್ಯವಿದೆ. ತಂದೆ-ತಾಯಿಗಳು ಜೀವವನ್ನು ನೀಡಿದರೆ ಗುರು ಜೀವನವನ್ನು ನೀಡುತ್ತಾರೆ ಎಂದು ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
ಪಡುಕುತ್ಯಾರಿನ ಶ್ರೀಮತ್ ಆನೆಗುಂದಿ ಮಹಾಸಂಸ್ಥಾನದಲ್ಲಿ ಚಾತುರ್ಮಾಸ್ಯ ವೃತಾಚರಣೆ ನಡೆಸುತ್ತಿರುವ ಕಟಪಾಡಿ ಶ್ರೀಮತ್ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸಾಮೀಜಿಯವರ ಜನ್ಮವರ್ಧಂತ್ಯುತ್ಸದ ಪ್ರಯುಕ್ತ ಆ. 4ರಂದು ಜರಗಿದ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ವಿದ್ವಾನ್ ಪಂಜ ಭಾಸ್ಕರ ಭಟ್ ಮಾತನಾಡಿ, ಅತ್ಯಂತ ಪ್ರಾಚೀನ ಪರಂಪರೆಯಿರುವ ಆನೆಗುಂದಿ ಮಹಾಸಂಸ್ಥಾನದ ಯತಿ ಪೀಠವು ಪುನರುದ್ಧಾರಗೊಂಡಿರುವುದು ವಿಶ್ವಬ್ರಾಹ್ಮಣರು ಮಾತ್ರವಲ್ಲದೇ ಸಮಸ್ತ ಭರತ ಖಂಡದ ಮಹಾಭಾಗ್ಯವಾಗಿದೆ ಎಂದು ಹೇಳಿದರು.
ಚಾತುರ್ಮಾಸ್ಯದ ಪ್ರಯುಕ್ತ ಜರಗಲಿರುವ ವೈದಿಕ ಸಮಾವೇಶ, ವಿದ್ಯಾರ್ಥಿ ಮತ್ತು ಯುವ ಸಮಾವೇಶ ಹಾಗೂ ಮಹಿಳಾ ಸಮಾವೇಶಗಳ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಕಾಳಹಸ್ತೇಂದ್ರ ಶ್ರೀಗಳ ಜನ್ಮ ವರ್ಧಂತಿ ಉತ್ಸವದ ಅಂಗವಾಗಿ 43 ಬಿಲ್ವ ಪತ್ರೆ ಸಸಿಗಳನ್ನು ಬಿಲ್ವಪತ್ರೆ ಸಸಿಗಳನ್ನು ವಿತರಿಸಲಾಯಿತು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ಬಿ. ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ ಅಧ್ಯಕ್ಷತೆ ವಹಿಸಿದ್ದರು. ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಬೆಂಗಳೂರು ವಲಯ ಸಮಿತಿ ಅಧ್ಯಕ್ಷ ಎಂ.ಜಿ. ನಾಗೇಶ್ ಆಚಾರ್ಯ, ಪುತ್ತೂರು ವಲಯ ಸಮಿತಿ ಅಧ್ಯಕ್ಷ ವಿ. ಪುರುಷೋತ್ತಮ ಆಚಾರ್ಯ, ಉಡುಪಿ ವಲಯ ಸಮಿತಿ ಅಧ್ಯಕ್ಷ ಸುಧಾಕರ ಆಚಾರ್ಯ, ವಿಟ್ಲ ವಲಯ ಸಮಿತಿ ಅಧ್ಯಕ್ಷ ಎನ್. ಪುರಂದರ ಆಚಾರ್ಯ, ಮಂಜೇಶ್ವರ ವಲಯ ಸಮಿತಿ ಅಧ್ಯಕ್ಷ ಬಿ.ಎಂ. ಅಶೋಕ ಆಚಾರ್ಯ, ಉದ್ಯಾವರ ಸಮಿತಿ ಅಧ್ಯಕ್ಷ ಯು.ಬಿ ಗಂಗಾಧರ ಆಚಾರ್ಯ, ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಪಂಚಸಿಂಹಾಸನ ವಿಕಾಸ ಸಮಿತಿಯ ಕೋಶಾಧಿಕಾರಿ ದಿನೇಶ್ ಆಚಾರ್ಯ ಪಡುಬಿದ್ರಿ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ. ಗಂಗಾಧರ ಆಚಾರ್ಯ, ವಿವಿಧ ದೇಗುಲಗಳ ಆಡಳಿತ ಮೊಕ್ತೇಸರರಾದ ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ, ಬಿ. ಸುಂದರ ಆಚಾರ್ಯ, ಕೇಶವ ಆಚಾರ್ಯ ಮಂಗಳೂರು, ನವೀನ್ ಆಚಾರ್ಯ, ಪರಮೇಶ್ವರ ಆಚಾರ್ಯ, ಕೆ. ರತ್ನಾಕರ ಆಚಾರ್ಯ, ಮಂಜುನಾಥ ಆಚಾರ್ಯ, ಮಧುಕರ ಚಂದ್ರಶೇಖರ ಆಚಾರ್ಯ, ಎ. ಶೇಖರ ಆಚಾರ್ಯ, ಸುಂದರ ಆಚಾರ್ಯ, ಪಿ. ಉಮೇಶ್ ಆಚಾರ್ಯ, ಹರೀಶ್ಚಂದ್ರ ಆಚಾರ್ಯ, ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಶ್ರೀ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಟಿ. ಸುಧಾಕರ ಆಚಾರ್ಯ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಆಚಾರ್ಯ, ಶ್ರೀ ಸರಸ್ವತೀ ಗೋಶಾಲಾ ಟ್ರಸ್ಟ್ ಅಧ್ಯಕ್ಷ ಜಯಕರ ಆಚಾರ್ಯ, ಮಹಾ ಸಂಸ್ಥಾನದ ಸಮೂಹ ಮಾಧ್ಯಮ ವಿಭಾಗದ ಮುಖ್ಯಸ್ಥ ವೈ. ಧರ್ಮೇಂದ್ರ ಆಚಾರ್ಯ, ಮುಂಬಯಿ ವಿಶ್ವಕರ್ಮ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ಆಚಾರ್ಯ ಮುಂಬಯಿ ಮೊದಲಾದವರು ಉಪಸ್ಥಿತರಿದ್ದರು.
ಕಟಪಾಡಿ ಶ್ರೀಮತ್ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಮುಖರಾದ ಕಾಡಬೆಟ್ಟು ನಾಗರಾಜ ಆಚಾರ್ಯ ವಂದಿಸಿದರು. ಗಂಗಾಧರ ಆಚಾರ್ಯ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.
ಸುಸಂಸ್ಕೃತ ಬದುಕು ಅಗತ್ಯ
ಗುರುವು ತಾನು ಮುಕ್ತನಾಗುವ ಜೊತೆಗೆ ಶಿಷ್ಯನನ್ನು ಮುಕ್ತಿ ಪಥಕ್ಕೆ ಕೊಂಡೊಯ್ಯುತ್ತಾನೆ. ವ್ಯಕ್ತಿ ಎಷ್ಟು ಕಾಲ ಬದುಕಿದ್ದಾನೆ ಎನ್ನುವುದು ಮುಖ್ಯವಲ್ಲ, ಬದಲಾಗಿ ಆತ ಬದುಕಿದಷ್ಟು ಕಾಲ ಏನು ಒಳ್ಳೆಯದನ್ನು ಸಾಧಿಸಿದ್ದಾನೆ ಎನ್ನುವುದು ಮುಖ್ಯವಾಗುತ್ತದೆ. ಆ ಕಾರಣದಿಂದಾಗಿ ನಾವು ಒಳ್ಳೆಯ ರೀತಿಯಲ್ಲಿ ಸುಸಂಸ್ಕೃತರಾಗಿ ಬದುಕುವುದು ಅತ್ಯಗತ್ಯವಾಗಿದೆ ಎಂದು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.