Home ಧಾರ್ಮಿಕ ಸುದ್ದಿ ಆನೆಗುಂದಿ ಶ್ರೀ ಚಾತುರ್ಮಾಸ್ಯ ಆಹ್ವಾನ ಪತ್ರಿಕೆ ಬಿಡುಗಡೆ

ಆನೆಗುಂದಿ ಶ್ರೀ ಚಾತುರ್ಮಾಸ್ಯ ಆಹ್ವಾನ ಪತ್ರಿಕೆ ಬಿಡುಗಡೆ

1209
0
SHARE

ಕಾಪು : ಸಮರ್ಪಣ ಸೇವಾ ಮನೋಭಾವನೆಯನ್ನು ತೊಡಗಿಸಿ ಕೊಳ್ಳುವಿಕೆಯಿಂದ ಕಾರ್ಯಕ್ರಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ. ಸಮಸ್ತ ಶಿಷ್ಯವೃಂದದವರು ಒಂದೇ ಮನಸ್ಸಿನಿಂದ ಸಂಘಟಿತರಾಗಿ ಕಾರ್ಯಪ್ರವೃತ್ತರಾದಲ್ಲಿ ಚಾತುರ್ಮಾಸ್ಯದ ಯಶಸ್ಸಾಗುತ್ತದೆ ಎಂದು ಕಟಪಾಡಿ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.

ಪಡುಕುತ್ಯಾರಿನ ಶ್ರೀಮತ್‌ ಆನೆಗುಂದಿ ಮಹಾಸಂಸ್ಥಾನದಲ್ಲಿ ನಡೆದ ಚಾತುರ್ಮಾಸ್ಯ ವ್ರತ ನಿರ್ವಹಣ ಸಮಿತಿ ಹಾಗೂ ಆನೆಗುಂದಿ ಪ್ರತಿಷ್ಠಾನದ ವಿಶೇಷ ಸಭೆಯಲ್ಲಿ ಜು.16ರಿಂದ ಸೆ.14ರವರೆಗೆ ನಡೆಯಲಿರುವ ತಮ್ಮ 15ನೇ ವರ್ಷದ ವಿಕಾರಿ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾತುರ್ಮಾಸ್ಯ ವ್ರತ ನಿರ್ವಹಣ ಸಮಿತಿ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಬಿ. ಸೂರ್ಯಕುಮಾರ್‌ ಆಚಾರ್ಯ ಹಳೆಯಂಗಡಿ ಮಾತನಾಡಿ, ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮುಂಬಯಿ, ಬೆಂಗಳೂರು, ಕೊಯಮತ್ತೂರು ಪ್ರದೇಶಗಳ ಕಾಳಿಕಾಂಬಾ ದೇಗುಲಗಳು ಒಟ್ಟಾಗಿ ಸೇರಿ ಪಡುಕುತ್ಯಾರಿನ ಮಹಾಸಂಸ್ಥಾನದಲ್ಲಿ ಈ ಬಾರಿಯ ವಿಕಾರಿ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯನ್ನು ಸಂಘಟಿಸುತ್ತಿವೆ. ಸಮಸ್ತ ಶಿಷ್ಯವೃಂದದವರ ಮನೆ ಮನೆಗೆ ಆಮಂತ್ರಣ ಪತ್ರಿಕೆಯನ್ನು ತಲಪಿಸುವ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿಸುವ ಜವಾಬ್ದಾರಿಯನ್ನು ದೇವಸ್ಥಾನಗಳು, ಸಂಘ ಸಂಸ್ಥೆಗಳು, ವಲಯ ಸ‌ಮಿತಿ ಮತ್ತು ಮಹಾಸಂಸ್ಥಾನದ ಗುರುಸೇವಾ ಪರಿಷತ್‌ ವಹಿಸಿ ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.

ಚಾತುರ್ಮಾಸ್ಯ ವ್ರತಾಚರಣೆಯ ಪೂರ್ವಭಾವಿಯಾಗಿ ಶ್ರೀಗಳು ಕರಾವಳಿಯ 15 ದೇವಸ್ಥಾನಗಳಿಗೆ ಹಾಗೂ ಮುಂಬೈಗೆ ಸಂದರ್ಶನ ನೀಡುವ ದಿನಗಳನ್ನು ತೀರ್ಮಾನಿಸಲಾಯಿತು. ಸಭೆಯಲ್ಲಿ ಚಾತುರ್ಮಾಸ್ಯ ದಿನಗಳಂದು ನಡೆಯುವ ವಿವಿಧ ಕಾರ್ಯಕ್ರಮಗಳ ಸಿದ್ಧತೆಯ ಬಗ್ಗೆ ಚರ್ಚಿಸಿ ವಿವಿಧ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ಜೋತಿಷ ವಿದ್ವಾನ್‌ ಉಮೇಶ ಆಚಾರ್ಯ ಪಡೀಲು ಮಂಗಳೂರು, ಬ್ರಹ್ಮಶ್ರೀ ಪುರೋಹಿತ ಅಕ್ಷಯ ಶರ್ಮಾ ತಂತ್ರಿ, ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಸಮಿತಿಯ ಉಪಾಧ್ಯಕ್ಷರುಗಳಾದ ಕೆ. ಕೇಶವ ಆಚಾರ್ಯ ಮಂಗಳೂರು, ರತ್ನಾಕರ ಆಚಾರ್ಯ ಕಟ್ಟೆಮಾರ್‌ ಕಾರ್ಕಳ, ಮಧುಕರ ಚಂದ್ರಶೇಖರ ಆಚಾರ್ಯ ಹೊನ್ನಾವರ ಗೋಕರ್ಣ, ಎ. ಶೇಖರ ಆಚಾರ್ಯ ಕಾಪು, ಕೆ. ಸುಧಾಕರ ಆಚಾರ್ಯ ಕೊಲಕಾಡಿ, ಎ. ಸುಧಾಕರ ಆಚಾರ್ಯ ಎಡನೀರು ಆರಿಕ್ಕಾಡಿ ಕುಂಬಳೆ, ಪ್ರವೀಣ ಆಚಾರ್ಯ ರಂಗನಕೆರೆ ಬಾರ್ಕೂರು, ಕೆ.ಹರೀಶ್‌ ಆಚಾರ್ಯ ಕಾರ್ಕಳ, ವೈ. ಧರ್ಮೇಂದ್ರ ಆಚಾರ್ಯ ಕಾಸರಗೋಡು, ಆನೆಗುಂದಿ ಸರಸ್ವತೀ ಎಜುಕೇಶನಲ್ ಟ್ರಸ್ಟ್‌ ಅಧ್ಯಕ್ಷ ಟಿ. ಸುಧಾಕರ ಆಚಾರ್ಯ ತ್ರಾಸಿ, ಆನೆಗುಂದಿ ಸರಸ್ವತೀ ಗೋಶಾಲಾ ಟ್ರಸ್ಟ್‌ ಅಧ್ಯಕ್ಷ ಜಯಕರ ಆಚಾರ್ಯ ಕರಂಬಳ್ಳಿ, ವಿವಿಧ ಉಪ ಸಮಿತಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ವೇದ ಸಂಜೀವಿನಿ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ.ಬಿ. ಆಚಾರ್‌ ಕಂಬಾರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕಾಡಬೆಟ್ಟು ನಾಗರಾಜ ಆಚಾರ್ಯ ವಂದಿಸಿದರು.

LEAVE A REPLY

Please enter your comment!
Please enter your name here