ಮಹಾನಗರ : ನೀರು ಮಾರ್ಗ ಸಮೀಪದ ಪಡು ಅರಸು ಮುಂಡಿತ್ತಾಯ ಧೂಮಾವತಿ ಬಂಟ ಹಾಗೂ ಪರಿವಾರ ದೈವಗಳ ದೈವಸ್ಥಾನದ ಮುಂಡಿತ್ತಾಯ ದೈವದ ಮೊಗ, ಆಭರಣ ಸಮರ್ಪಣೆ ಮತ್ತು ಕಲಶಾಭಿಷೇಕ ಗುರುವಾರ ಪಡುಕಾಪೆಟ್ಟು ಗುತ್ತು ಭಂಡಾರ ಮನೆಯಲ್ಲಿ ನಡೆಯಿತು.
ಬೊಳ್ಳಾರಗುತ್ತು ಶ್ರೀನಿವಾಸ ಭಟ್ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಧಾರ್ಮಿಕ ವಿಧಿ ವಿಧಾನ ಆರಂಭ ವಾಗಿ, ಬೆಳಗ್ಗೆ 10ಕ್ಕೆ ಹೂವಿ ನ ಪೂಜೆ, ಹೋಮಕಜ್ಜಾಯ ಮಧ್ಯಾಹ್ನ 11ರಿಂದ
ಮುಂಡಿತ್ತಾಯ ದೈವದ ಮೊಗ ಹಾಗೂ ಆಭರಣಗಳ ಸಮರ್ಪಣೆ, ಕಲಶಾ ಭಿಷೇಕ, ಬಳಿಕ ಸಾರ್ವಜನಿಕ ಅನ್ನ ಸಂತ ರ್ಪಣೆ ನಡೆಯಿತು.
ಈ ಸಂದರ್ಭ ಬದಿನಡಿ ದೈವ ಸ್ಥಾನದ ಆಡಳಿತ ಮೊಕ್ತೇಸರ ಪದ್ಮ ನಾಭ ಕೋಟ್ಯಾನ್, ಶಶಿಧರ ಭಟ್ ಬೊಳ್ಳಾರ ಗುತ್ತು, ಸತೀಶ್ ಶೆಟ್ಟಿ ಮೂಡುಜಪ್ಪುಗುತ್ತು, ರಾಜ್ಕುಮಾರ್ ಶೆಟ್ಟಿ ತಿರುವೈಲು ಗುತ್ತು, ಪದ್ಮನಾಭ ಶೆಟ್ಟಿ ಪೆರ್ಮಂಕಿ, ದೈವಸ್ಥಾನದ ಮೊಕ್ತೇಸರರಾದ ಮೋಹನ್ದಾಸ್ ಶೆಟ್ಟಿ
ಪಡುಪಳ್ಳಿ, ಭೋಜ ಯಾನೆ ಮುಂಡ ಪೂಜಾರಿ, ಸುರೇಶ್ ಶೆಟ್ಟಿ ಕಾಪೆಟ್ಟುಗುತ್ತು, ಕೇಶವ ಪೂಜಾರಿ ಕರಂದಾಡಿ, ಮನೋಹರ್ ಬದಿನಡಿ, ಯಶೋದಾ, ಅನುಷಾ, ಚಂದ್ರಶೇಖರ ಕಾಪೆಟ್ಟುಗುತ್ತು, ತಾ.ಪಂ. ಸದಸ್ಯ ಶ್ರೀಧರ್, ತಾ.ಪಂ. ಮಾಜಿ ಅಧ್ಯಕ್ಷ ಗೋಕುಲ್ದಾಸ್ ಶೆಟ್ಟಿ ಪಡುಪಳ್ಳಿ, ನಾಗರಾಜ ಶೆಟ್ಟಿ ತಿಮಿರಿಗುತ್ತು, ಕೊರಗ ಆಳ್ವ ಕೊಂಬೆಲ್, ಉಮೇಶ್ ತಾರಿಗುಡ್ಡೆ, ಸದಾನಂದ ವಾಮಂಜೂರು ಮತ್ತಿತರರುಉಪಸ್ಥಿತರಿದ್ದರು.
ಸಂಭ್ರಮದ ಮೆರವಣಿಗೆ
ಬುಧವಾರ ಸಂಜೆ 4 ಗಂಟೆಗೆ ಬದಿನಡಿ ಕ್ಷೇತ್ರದಿಂದ ಕಾಪೆಟ್ಟು ಗುತ್ತುವಿಗೆ ಮುಂಡಿತ್ತಾಯ ದೈವದ ನೂತನ ಮೊಗ,ಇತರ ಆಭರಣಗಳ ಮೆರವಣಿಗೆ ನಡೆಯಿತು.
ಮಾ. 14ರಿಂದ ವಾರ್ಷಿಕ ಜಾತ್ರೆ
ಶ್ರೀ ಬದಿನಡಿ ಕ್ಷೇತ್ರದಲ್ಲಿ ಮಾ.14ರಿಂದ 17ರ ವರೆಗೆ ವರ್ಷಾವ ಉತ್ಸವ ನಡೆಯಲಿದೆ.