ಉಡುಪಿ: ಪಡುಕಾಡೂರು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಎ. 30ರಂದು ವಾರ್ಷಿಕ ಮಹೋತ್ಸವ ಜರಗಲಿದೆ.
ಬೆಳಗ್ಗೆ 8ರಿಂದ ಪ್ರಣ್ಯಾಹ ವಾಚನ, ನಾಗ ಸನ್ನಿಧಿ ಮತ್ತು ಪಾಷಾಣ ಕುಟ್ಟಿ ಸನ್ನಿಧಿಯಲ್ಲಿ ನವಕ ಪ್ರಧಾನ ಕಲಶ ಸ್ಥಾಪನಾ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, 10ರಿಂದ
ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಭಜನೆ, ರಾತ್ರಿ 8ರಿಂದ ಕಲ್ಲುಕುಟಿಗ ಕೋಲ, ಬೇವು ಉಡುಗೆ, ಕೆಂಡೋತ್ಸವ, ಮೇ 1ರ ಬೆಳಗ್ಗೆ ತುಲಾಭಾರ ಸೇವೆ ನಡೆಯಲಿದೆ ಎಂದು ಮೊಕ್ತೇಸರ ಕೆ. ಶಿವರಾಮ ಶೆಟ್ಟಿ ತಿಳಿಸಿದ್ದಾರೆ.