Home ಧಾರ್ಮಿಕ ಸುದ್ದಿ ಪಡುಗುಡ್ಡೆ ಶ್ರೀ ಸರ್ವೇಶ್ವರ ದೇಗುಲ

ಪಡುಗುಡ್ಡೆ ಶ್ರೀ ಸರ್ವೇಶ್ವರ ದೇಗುಲ

'ಭಗವಂತನ ಸ್ಮರಣೆಯಿಂದ ಆತ್ಮತೃಪ್ತಿ'

1441
0
SHARE

ಮಲ್ಪೆ: ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆ ಅತೀ ಮುಖ್ಯ. ನಾಮಸ್ಮರಣೆಯಿಂದ ಆತ್ಮ ತೃಪ್ತಿಯಾಗುತ್ತದೆ. ಶಿವರಾತ್ರಿಯಂದು ಶಿವನನ್ನು ಭಕ್ತಿಯಿಂದ ಪೂಜಿಸಿದರೆ ಪಾಪಗಳು ನಾಶವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಉಡುಪಿ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ನುಡಿದರು.

ಅವರು ಮಂಗಳವಾರ ಮಲ್ಪೆ ಬಾಪುತೋಟ ಪಡುಗಡ್ಡೆ ಶ್ರೀ ಸರ್ವೇಶ್ವರ ದೇವಸ್ಥಾನದ 21ನೇ ವರ್ಧಂತಿ, ಶಿವರಾತ್ರಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ನಗರಸಭಾ ಸದಸ್ಯ ನಾರಾಯಣ ಪಿ. ಕುಂದರ್‌, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಣೇಶ್‌ ಅಮೀನ್‌, ದೇವಸ್ಥಾನದ ಸಮಿತಿಯ ಅಧ್ಯಕ್ಷ್ಯ ದಿನೇಶ್‌ ಜಿ. ಸುವರ್ಣ ಬಾಪುತೋಟ, ಉಪಾಧ್ಯಕ್ಷ ಸತೀಶ್‌ ಕೋಟ್ಯಾನ್‌, ಪ್ರಧಾನ ಕಾರ್ಯದರ್ಶಿ ಜಗನ್ನಾಥ್‌ ಸುವರ್ಣ, ಜತೆ ಕಾರ್ಯದರ್ಶಿ ವಿನಯ ಕರ್ಕೇರ, ಉದ್ಯಮಿ ವಿ. ಮೋಹನ್‌, ಸ್ತ್ರೀಶಕ್ತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಜಯಂತಿ ಜಗಜೀವನ್‌ ಉಪಸ್ಥಿತರಿದ್ದರು.

ನಗರಸಭಾ ಸದಸ್ಯ ನಾರಾಯಣ ಪಿ. ಕುಂದರ್‌, ಸಮಾಜ ಸೇವಕ ಸತೀಶ್‌ ಸನಿಲ್‌ ಅವರನ್ನು ದೇವಸ್ಥಾನದ ವತಿಯಿಂದ ಸಮ್ಮಾನಿಸಲಾಯಿತು. ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಸುಧಾಕರ್‌ ಸ್ವಾಗತಿಸಿ, ನಿರೂಪಿಸಿದರು. ಶಾಲಿನಿ ಆರ್‌. ಬಾಪುತೋಟ ವಂದಿಸಿದರು.

ನಿರಂತರ ಸೇವೆ ನಡೆಯಲಿ: ಶೀರೂರು ಶ್ರೀ
ಉಡುಪಿ ಶ್ರೀ ಕೃಷ್ಣ ಮತ್ತು ಮಲ್ಪೆಗೆ ಅವಿನಾಭಾವ ಸಂಬಂಧವಿದೆ ಎಂದ ಶೀರೂರು ಶ್ರೀಪಾದರು ದೇವತಾ ಕ್ಷೇತ್ರದಲ್ಲಿ ನಡೆಯುವ ಅನ್ನದಾನ, ಸಮಾಜಸೇವೆ ದೇವರಿಗೆ ಪ್ರೀತಿ ತರುವಂತದ್ದು. ಕ್ಷೇತ್ರದಲ್ಲಿ ಇದೇ ರೀತಿ ನಿರಂತರವಾಗಿ ಸೇವಾ ಚಟುವಟಿಕೆಗಳು ನಡೆದು ಕ್ಷೇತ್ರ ಇನ್ನಷ್ಟು ಬೆಳಗುವಂತಾಗಲಿ ಎಂದರು.

LEAVE A REPLY

Please enter your comment!
Please enter your name here