Home ಧಾರ್ಮಿಕ ಕಾರ್ಯಕ್ರಮ ಪಡುಗುಡ್ಡೆ ಶ್ರೀ ಕ್ಷೇತ್ರ ಸರ್ವೇಶ್ವರ ದೇವಸ್ಥಾನ: ಶಿವರಾತ್ರಿ ಮಹೋತ್ಸವ ಸಂಪನ್ನ

ಪಡುಗುಡ್ಡೆ ಶ್ರೀ ಕ್ಷೇತ್ರ ಸರ್ವೇಶ್ವರ ದೇವಸ್ಥಾನ: ಶಿವರಾತ್ರಿ ಮಹೋತ್ಸವ ಸಂಪನ್ನ

1134
0
SHARE

ಮಲ್ಪೆ: ಬಾಪುತೋಟ ಪಡುಗುಡ್ಡೆ ಶ್ರೀಕ್ಷೇತ್ರ ಸರ್ವೇಶ್ವರ ದೇವಸ್ಥಾನದ 21ನೇ ವರ್ಧಂತ್ಯುತ್ಸವವು ಫೆ. 13ರಿಂದ 15ರ ಪರ್ಯಾಂತ ಕೋಟ ಚಂದ್ರಶೇಖರ ಸೋಮಯಾಜಿ ಅವರ ನೇತೃತ್ವದಲ್ಲಿ ಜರಗಿತು.

ಪಂಚದೈವ ನಾಗಬ್ರಹ್ಮಸ್ಥಾನದಲ್ಲಿ ಆಶ್ಲೇಷಾಬಲಿ, ಕಲಾಭಿವೃದ್ಧಿ ಹೋಮ, ನವಕಲಶ ಸ್ನಪನ, ಸಂಜೆ ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ಕಲಾಭಿವೃದ್ಧಿ ಹೋಮ, ನವಕಲಶಸ್ನಪನ ನಡೆಯಿತು. ಫೆ. 15ರಂದು ಬೆಳಗ್ಗೆ ಸರ್ವೇಶ್ವರನ ಸನ್ನಿಧಿಯಲ್ಲಿ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಉಡುಪಿ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು ಆಶೀರ್ವಚನ ನೀಡಿದರು.

ಸಾಯಂಕಾಲ ಕಿದಿಯೂರು ಪಡುಕರೆ ರಾಮಮಿತ್ರ ಭಜನ ಮಂದಿರದ ಸದಸ್ಯರಿಂದ ಭಜನ ಕಾರ್ಯಕ್ರಮ ಜರಗಿತು. ದೇವಸ್ಥಾನದ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರುಗಳು ಹಾಗೂ ಭಕ್ತ ಜನರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here