Home ಧಾರ್ಮಿಕ ಸುದ್ದಿ ಶ್ರೀ ನಿತ್ಯಾನಂದ ಗುರುಗಳ ಪ್ರತಿಷ್ಠೆ, ಕಲಶಾಭಿಷೇಕ

ಶ್ರೀ ನಿತ್ಯಾನಂದ ಗುರುಗಳ ಪ್ರತಿಷ್ಠೆ, ಕಲಶಾಭಿಷೇಕ

ಪಡುಬಿದ್ರಿ ಬಂಟರ ಸಂಘ

1015
0
SHARE
ಉಚ್ಚಿಲ ವೇ| ಮೂ| ರಾಘವೇಂದ್ರ ಉಪಾಧ್ಯಾಯರು ಶ್ರೀ ನಿತ್ಯಾನಂದ ಗುರುಗಳ ಪ್ರತಿಷ್ಠೆ, ಕಲಶಾಭಿಷೇಕ ನೆರವೇರಿಸಿದರು.

ಪಡುಬಿದ್ರಿ : ಬಂಟರ ಸಂಘ ಪಡುಬಿದ್ರಿ ಮತ್ತು ಬಂಟ್ಸ್‌ ವೆಲ್‌ಫೇರ್‌ ಟ್ರಸ್ಟ್‌ ವತಿಯಿಂದ ಪಡುಬಿದ್ರಿ ಬಂಟರ ಭವನದಲ್ಲಿ ಶ್ರೀ ನಿತ್ಯಾನಂದ ಗುರುಗಳ ಮೂರ್ತಿ ಪ್ರತಿಷ್ಠೆಯು ಉಚ್ಚಿಲದ ವೇ| ಮೂ| ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ನಡೆಯಿತು.

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೆಳಗ್ಗೆ ನಾಗದೇವರಿಗೆ ಪಂಚಾಮೃತಾಭಿಷೇಕ ಸೇವೆ, ಬಂಟರ ಚಾವಡಿಯಲ್ಲಿ ಗಣಪತಿ ಹೋಮಾದಿಗಳು ನೆರವೇರಿದವು.

ಬಂಟರ ಸಂಘದ ಅಧ್ಯಕ್ಷ ಡಾ| ದೇವಿಪ್ರಸಾದ್‌ಶೆಟ್ಟಿ, ಬಂಟ್ಸ್‌ ವೆಲ್‌ ಫೇರ್‌ ಟ್ರಸ್ಟ್‌ ಅಧ್ಯಕ್ಷ ಎರ್ಮಾಳು ಶಶಿಧರ ಕೆ. ಶೆಟ್ಟಿ, ಸಿರಿಮುಡಿ ದತ್ತಿ ನಿಧಿಯ ಸ್ಥಾಪಕ, ಬಂಟ್ಸ್‌ ಸಂಘದ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ ಸೇರಿದಂತೆ ದಾನಿಗಳಾದ ಪುಣೆ ಉದ್ಯಮಿ ಎರ್ಮಾಳು ಚಂದ್ರಹಾಸ ಶೆಟ್ಟಿ, ಸಾರಿಕಾ ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಉಮಾ ಕೆ. ಶೆಟ್ಟಿ, ರಘುರಾಮ ಶೆಟ್ಟಿ ಬೋಳ, ಭವಾನಿ ಆರ್‌. ಶೆಟ್ಟಿ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಕುರ್ಕಿಲ್‌ಬೆಟ್ಟು, ಎರ್ಮಾಳು ರೋಹಿತ್‌ ಹೆಗ್ಡೆ, ಎರ್ಮಾಳು ಉದಯ ಶೆಟ್ಟಿ, ಪಡುಬಿದ್ರಿ ಬ್ರಹ್ಮಸ್ಥಾನದ ಪಾತ್ರಿ ಪಿ.ಜಿ. ನಾರಾಯಣ ರಾವ್‌, ಕೊರ್ನಾಯ ಶ್ರೀಪತಿ ರಾವ್‌, ಕೊರ್ನಾಯ ಪದ್ಮನಾಭ ರಾವ್‌, ಪಡುಬಿದ್ರಿ ಬೀಡಿನ ಅರಸರಾದ ರತ್ನಾಕರ ರಾಜ್‌ ಅರಸ್‌ ಕಿನ್ಯಕ್ಕ ಬಲ್ಲಾಳರು, ಸಂಘದ ಪದಾಧಿಕಾರಿಗಳಾದ ಪ್ರಕಾಶ್‌ ಶಟ್ಟಿ ಪಡುಹಿತ್ಲು, ರವಿ ಶೆಟ್ಟಿ ಗುಂಡ್ಲಾಡಿ, ಶ್ರೀನಾಥ್‌ ಹೆಗ್ಡೆ, ಅನಿಲ್‌ ಕುಮಾರ್‌ ಶೆಟ್ಟಿ, ಸಂತೋಷ್‌ ಕುಮಾರ್‌ ಶೆಟ್ಟಿ, ನೇತ್ರಾವತಿ ಶೆಟ್ಟಿ, ಶಿವಪ್ರಸಾದ್‌ ಶೆಟ್ಟಿ ಎಲ್ಲದಡಿ, ಮಾಧವ ಶೆಟ್ಟಿ, ಮುರಳೀನಾಥ ಶೆಟ್ಟಿ, ವಿನಯ ಶೆಟ್ಟಿ, ಜಯ ಶೆಟ್ಟಿ ಪದ್ರ, ಧನಪಾಲ್‌ ಶೆಟ್ಟಿ, ಸುಧಾಕರ ಶೆಟ್ಟಿ, ಹರೀಶ್‌ ಶೆಟ್ಟಿ ಪಾದೆಬೆಟ್ಟು ನೇತೃತ್ವ ವಹಿಸಿದ್ದರು.

ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀಗಳು ಆಶೀರ್ವಚನ ನೀಡಿ, ಅವಧೂತ ಪರಂಪರೆಗೆ ದೊಡ್ಡ ಕೊಡುಗೆ ನೀಡಿದವರು ಶ್ರೀ ನಿತ್ಯಾನಂದರು ಎಂದರು. ವಜ್ರದೇಹಿ ಶ್ರೀಗಳು ಆಶೀರ್ವಚನ ನೀಡಿ, ಜಗತ್ತಿನ ನೋವನ್ನು ತಾನುಂಡು ಜಗತ್ತಿಗೆ ಬೆಳಕು ನೀಡಿದವರು ಮತ್ತು ಬಂಟ ಸಮಾಜಕ್ಕೆ ವಿಶೇಷ ಅನುಗ್ರಹ ನೀಡಿದವರು ಶ್ರೀ ನಿತ್ಯಾನಂದ ಗುರುಗಳು ಎಂದರು.

ಸಮ್ಮಾನ
ಕಾಂಞಂಗಾಡ್‌ ಶ್ರೀ ನಿತ್ಯಾನಂದ ಆಶ್ರಮದ ಶ್ರೀ ವಿಜಯಾನಂದ ಸ್ವಾಮೀಜಿ, ರಾಘವೇಂದ್ರ ಉಪಾಧ್ಯಾಯ ಮತ್ತು ವಾದ್ಯ ಕಲಾವಿದ ಹಿದಾಯತುಲ್ಲ ಎರ್ಮಾಳು ಅವರನ್ನು ಸಮ್ಮಾನಿಸಲಾಯಿತು.

LEAVE A REPLY

Please enter your comment!
Please enter your name here