ಪಡುಬಿದ್ರಿ: ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವರ ಮಹಾ ರಥೋತ್ಸವವು ಮಾ. 18ರಂದು ನಡೆಯಲಿದೆ.
ಮಾ. 13ರಂದು ರಾತ್ರಿ ಅಂಕುರಾರೋಹಣ, ಪ್ರಾಸಾದ ಶುದ್ಧಿ, ಮಹಾ ರಂಗಪೂಜೆಗಳೊಂದಿಗೆ ಮಹೋತ್ಸವ ಆರಂಭಗೊಳ್ಳುವುದು. ಮಾ. 14ರಂದು ಬೆಳಗ್ಗೆ ನವಗ್ರಹ ಯಾಗ, 11 ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಮಾ. 15ರಂದು ಬಡಗು ಸವಾರಿ, ಮಾ. 16ರಂದು ಮೂಡು ಸವಾರಿ, ಮಾ. 17ರಂದು ಕೆರೆದೀಪ, ಚಂದ್ರ ಮಂಡಲ ಉತ್ಸವ, ಪಡು ಸವಾರಿ, ಮಾ. 18ರಂದು ಪೂರ್ವಾಹ್ನ 11 ಗಂಟೆಗೆ ರಥಾರೋಹಣ, ಮಹಾ ಅನ್ನಸಂತರ್ಪಣೆ, ರಾತ್ರಿ 8.30ಕ್ಕೆ ಮಹಾ ರಥೋತ್ಸವ, ಭೂತ ಬಲಿ, ಕವಾಟ ಬಂಧನ, ಮಾ. 19ರಂದು ಸೂರ್ಯೋದಯಕ್ಕೆ ಕವಾಟೋದ್ಘಾಟನೆ, ತುಲಾಭಾರ, ರಾತ್ರಿ ಅವಭೃಥ, ಧ್ವಜಾವರೋಹಣ, ಮಹಾ ಮಂತ್ರಾಕ್ಷತೆ ನಡೆಯಲಿದೆ ಎಂದು ದೇವಸ್ಥಾನದ ತಂತ್ರಿಗಳು, ಅರ್ಚಕರು, ಪವಿತ್ರಪಾಣಿ ಮತ್ತು ಕಾರ್ಯನಿರ್ವಹಣಾಧಿಕಾರಿ ಎನ್. ಉಮಾಶಂಕರ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.