ಪಡುಬಿದ್ರಿ: ಜ್ಞಾನಯುಕ್ತ ಭಕ್ತಿ ಹಾಗೂ ಭಕ್ತಿಯುಕ್ತ ಜ್ಞಾನದಿಂದ ಭಗವಂತನ ಸಾಕ್ಷಾತ್ಕಾರ ಸಾಧ್ಯ. ಪ್ರತಿಯೊಬ್ಬರೂ ಶಾಂತಿಯನ್ನು ಅರಸುತ್ತಾರೆ.ಆದರೆ ನಮ್ಮಲ್ಲೇ ಶಾಂತಿ ಇರುವುದನ್ನು ಮರೆಯುತ್ತಾರೆ. ಸಾಧನೆ ಮೂಲಕ ಶಾಂತಿಯನ್ನು ಗಳಿಸಬೇಕು ಎಂದು ಕೇಮಾರು ಸಾಂದೀಪನೀ
ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಅವರು ಹೆಜಮಾಡಿ ಮಟ್ಟು ಮೊಗವೀರ ಸಭಾ ಆಡಳಿತದ ಶ್ರೀ ಪಾಂಡುರಂಗ ಭಜನ ಮಂದಿರದ ಅಮೃತ ಮಹೋತ್ಸವ, ಶ್ರೀ ಪಾಂಡುರಂಗ ದೇವರಿಗೆ ಸ್ವರ್ಣ ಕವಚ ಸಮರ್ಪಣೆ, ನವಕ ಪ್ರದಾನ ಕಲಶಾಭಿಷೇಕ ಮತ್ತು ಅಖಂಡ ಭಜನ ಸಪ್ತಾಹದ ಅಂಗವಾಗಿ ಮಂಗಳವಾರದಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚಿಸಿದರು.
ಅವರಾಲು ಕಂಕಣಗುತ್ತು ಗುತ್ತಿನಾರ್ ಕೃಷ್ಣ ಶೆಟ್ಟಿ ಸಮಾರಂಭ ಉದ್ಘಾಟಿಸಿದರು. ಸಾಯಿರಾಧಾ ಡೆವಲಪರ್ ಆಡಳಿತ ನಿರ್ದೇಶಕ ಮನೋಹರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಕರಾವಳಿಯ ಮಂದಿ ಹೋಮ್ ಸ್ಟೇ ಸಹಿತ ಪ್ರವಾಸೋದ್ಯಮ ದಂತಹ ಪೂರಕ ಉದ್ಯಮಗಳಿಗೆ ಹೊಂದಿ ಕೊಳ್ಳಬೇಕು ಎಂದರು.
ಹೆಜಮಾಡಿ ವೇ| ಮೂ| ರಂಗಣ್ಣ ಭಟ್, ಮಟ್ಟು ಮೊಗವೀರ ಸಭಾದ ಗೌರವಾಧ್ಯಕ್ಷ ನಾರಾಯಣ ಕೆ. ಮೆಂಡನ್ ಮಟ್ಟುಪಟ್ಣ ಮತ್ತು ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಶಶಿ ಜಿ. ಪುತ್ರನ್ ಅವರನ್ನು ಸಂಘಟಕರ ಪರವಾಗಿ ಸಮ್ಮಾನಿಸಲಾಯಿತು.
ಉದ್ಯಮಿ ದಯಾನಂದ ಹೆಜಮಾಡಿ, ಉಡುಪಿ ತಾ | ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್, ಶಶಿಕಾಂತ್ ಪಡುಬಿದ್ರಿ, ಹೆಜಮಾಡಿ ಏಳೂರು ಮೊಗವೀರ ಸಭಾ ಅಧ್ಯಕ್ಷ ವಿಜಯ ಕೆ. ಕೋಟ್ಯಾನ್,ಉದ್ಯಮಿ ಸಂದೇಶ್ ಶೆಟ್ಟಿ, ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಸದಾನಂದ ವಿ. ಸುವರ್ಣ, ಮಟ್ಟು ಮೊಗವೀರ ಸಭಾ ಅಧ್ಯಕ್ಷ ಬಾಲಕೃಷ್ಣ ಎಲ್. ಸುವರ್ಣ, ಮುಂಬಯಿ ಸಮಿತಿಯ ಗೌರವಾಧ್ಯಕ್ಷ ಪುರಂದರ ಜಿ. ಸಾಲ್ಯಾನ್, ಮಹಿಳಾ ಸಭಾ ಅಧ್ಯಕ್ಷೆ ಶಾರದಾ ಎಸ್. ಬಂಗೇರ, ಶಶಿ ಜಿ. ಪುತ್ರನ್,ನಾರಾಯಣ ಕೆ. ಮೆಂಡನ್, ಅಮೃತ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಧನಂಜಯ ಎಲ್. ಬಂಗೇರ, ಕೇಶವ ಎನ್. ಶ್ರೀಯಾನ್, ಮಟ್ಟು ವಿದ್ಯಾದಾಯಿನಿ ಯುವತಿ ವೃಂದದ ಅಧ್ಯಕ್ಷೆ ಭಾರತಿ ಕೆ. ಶ್ರೀಯಾನ್, ಮುದ್ದಣ್ಣ ಕರ್ಕೇರ, ಮಟ್ಟು ವಿದ್ಯಾದಾಯಿನಿ ಯುವಕ ವೃಂದದ ಅಧ್ಯಕ್ಷ ಹರೀಶ್ ಡಿ. ಪುತ್ರನ್, ಚೆನ್ನಕೇಶವ ಮೆಂಡನ್, ರೋಹಿತಾಕ್ಷ ಕರ್ಕೇರ ಮುಖ್ಯ ಅತಿಥಿಗಳಾಗಿದ್ದರು.
ಪವಿತ್ರಾ ಗಿರೀಶ್ ಸ್ವಾಗತಿಸಿದರು. ಮಧುರಾಜ್ ಗುರುಪುರ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಕೇಮಾರು ಶ್ರೀಗಳನ್ನು ಹೆಜಮಾಡಿ ಬಸ್ನಿಲ್ದಾಣದಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಬಳಿಕ ನೂತನ ಸ್ವಾಗತ ಗೋಪುರವನ್ನು ಶಶಿ ಜಿ. ಪುತ್ರನ್ ಉದ್ಘಾಟಿಸಿದರು.