Home ಧಾರ್ಮಿಕ ಸುದ್ದಿ ಪಡುಬೆಟ್ಟು ಪಲ್ಲದಗಂಡಿ: ಕಾಲಾವಧಿ ನೇಮ, ಧಾರ್ಮಿಕ ಸಭೆ

ಪಡುಬೆಟ್ಟು ಪಲ್ಲದಗಂಡಿ: ಕಾಲಾವಧಿ ನೇಮ, ಧಾರ್ಮಿಕ ಸಭೆ

1196
0
SHARE

ನೆಲ್ಯಾಡಿ : ನೆಲ್ಯಾಡಿ ಗ್ರಾಮದ ಪಲ್ಲದಗಂಡಿ ಶ್ರೀ ಆದಿನಾಗಬ್ರಹ್ಮ ಗಡಿ ಯಾಡಿ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಕಾಲಾವಧಿ ನೇಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಮಂಗಳೂರು ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ| ಅಭಯ್‌ ಕುಮಾರ್‌ ಕೌಕ್ರಾಡಿ ಧಾರ್ಮಿಕ ಉಪನ್ಯಾಸ ನೀಡಿದರು.

ಪಲ್ಲದಗಂಡಿ ಶ್ರೀ ಆದಿನಾಗಬ್ರಹ್ಮ ಗಡಿ ಯಾಡಿ ಮೊಗೇರ್ಕಳ ಸೇವಾ ಟ್ರಸ್ಟ್‌ನ ಅಧ್ಯಕ್ಷ ರವಿಚಂದ್ರ ಪಡುಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ದಲಿತ್‌ ಸೇವಾ ಸಮಿತಿ ವಿಟ್ಲ ಇದರ ಜಿಲ್ಲಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಉದ್ಘಾಟಿಸಿದರು. ಅತಿಥಿಗಳಾಗಿದ್ದ ಕೌಕ್ರಾಡಿ-ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಧೀರ್‌ ಕುಮಾರ್‌ ಕೆ.ಎಸ್‌., ರಘುನಾಥ ರೈ ಹಾರ್ಪಳಗುತ್ತು, ಕುಟ್ರಾಪ್ಪಾಡಿ ಉ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕ ಮಾಯಿಲಪ್ಪ ಮಾಸ್ತರ್‌ ಬೊನ್ಯಸಾಗು ಮಾತನಾಡಿದರು.

ಪಲ್ಲದಗಂಡಿ ಶ್ರೀ ಆದಿನಾಗಬ್ರಹ್ಮ ಗಡಿಯಾಡಿ ಮೊಗೇರ್ಕಳ ಸೇವಾ ಟ್ರಸ್ಟ್‌ ನ ಕಾರ್ಯದರ್ಶಿ ಕೆ.ಪಿ. ಆನಂದ ಸ್ವಾಗತಿಸಿ ದರು. ಪುರುಷೋತ್ತಮ ಬೆಳ್ಳಾರೆ, ಸವಿತಾ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ದೈವಗಳ ಭಂಡಾರ ತೆಗೆದು, ರಾತ್ರಿ ಅನ್ನಸಂತರ್ಪಣೆ ಬಳಿಕ ಪಂಜುರ್ಲಿ ದೈವದ ನೇಮ, ಮೊಗೇರ್ಕಳ ದೈವಗಳು ಗರಡಿ ಇಳಿಯುವುದು, ಕಿನ್ನಿ ಮಾಣಿಗ ದೈವ ಗರಡಿ ಇಳಿಯುವ ಕಾರ್ಯಕ್ರಮ ನಡೆಯಿತು. ಸ್ವಾಮಿ ಕೊರಗಜ್ಜ ದೈವದ ನೇಮ, ಗುಳಿಗ ದೈವದ ನೇಮ ನಡೆಯಿತು.

ಸುಳ್ಯ ಶಾಸಕ ಎಸ್‌. ಅಂಗಾರ, ರಾಜೀವ ಗಾಂಧಿ ವಿವಿ ಸಿಂಡಿಕೇಟ್‌ ಸದಸ್ಯ ಡಾ| ರಘು ಬೆಳ್ಳಿಪ್ಪಾಡಿ, ತಾ.ಪಂ. ಸದಸ್ಯೆ ಉಷಾ ಅಂಚನ್‌, ನೆಲ್ಯಾಡಿ ಗ್ರಾ.ಪಂ. ಸದಸ್ಯರಾದ ಗಂಗಾಧರ ಶೆಟ್ಟಿ ಹೊಸಮನೆ, ಶಬ್ಬೀರ್‌ ಸಾಹೇಬ್‌ ಪಡುಬೆಟ್ಟು, ಚಿತ್ರಾ ಕೆ. ರಾಮನಗರ, ಮಾಜಿ ಸದಸ್ಯರಾದ ರವಿಪ್ರಸಾದ್‌ ಶೆಟ್ಟಿ, ಸುಂದರ ಗೌಡ ಅತ್ರಿಜಾಲು, ಕುಟ್ರಾಪ್ಪಾಡಿ ಗ್ರಾ.ಪಂ.ಸದಸ್ಯ ತನಿಯ ಮುಗೇರ ಸಂಪಡ್ಕ, ಪೆರಾಬೆ ಗ್ರಾ.ಪಂ. ಸದಸ್ಯ ದಿನೇಶ್‌ ಅಗತ್ತಾಡಿ, ಪ್ರಮುಖರಾದ ಶಿವರಾಮ ಗೌಡ ಮಕ್ಕಿಗದ್ದೆ, ಶಶಿಧರ ಬೊಟ್ಟಡ್ಕ, ಬಾಬು ಮೇಸ್ತ್ರೀ ನೆಕ್ಕರೆ ಆಲಂಕಾರು, ಶಶಾಂಕ ಗೋಖಲೆ ಹೊಸಮಠ, ಸುರೇಶ್‌ ಪಡಿಪಂಡ, ರಮೇಶ್‌ ಶೆಟ್ಟಿ ಬೀದಿ ಪಡುಬೆಟ್ಟು, ಗಿರೀಶ್‌ ಶೆಟ್ಟಿ ಬೀದಿ ಪಡುಬೆಟ್ಟು, ಹರೀಶ್‌ ಪಟ್ಲಡ್ಕ, ಚಂದ್ರಶೇಖರ ರೈ ರಾಮನಗರ, ರವಿಚಂದ್ರ ಅತ್ರಿಜಾಲು,ಸೀತಾರಾಮ ಕಾನಮನೆ, ಹರ್ಷ ಕೋಡಿ ಪಿಜಕ್ಕಳ ಪಾಲ್ಗೊಂಡಿದ್ದರು.

ದೈವದ ಪರಿಚಾರಕರಾದ ಗುರುವ ಬಡ್ತಳ, ಕಿಟ್ಟು ಪಡುಬೆಟ್ಟು, ಬಾಲಕೃಷ್ಣ ನೆಲ್ಯಾಡಿ, ಪೊಡಿಯಾ ಉಳಿತೊಟ್ಟು, ಜನಾರ್ದನ ಬೊಟ್ಟಡ್ಕ, ಗೋಜ ಕುರುಬರಕೇರಿ, ಪಲ್ಲದ ಗಂಡಿ ಶ್ರೀ ಆದಿನಾಗಬ್ರಹ್ಮ ಗಡಿಯಾಡಿ ಮೊಗೇರ್ಕಳ ಸೇವಾ ಟ್ರಸ್ಟ್‌ನ ಸದಸ್ಯರಾದ ಅಣ್ಣಿ ಎಲ್ತಿಮಾರ್‌, ಕೇಶವ ಕೆ. ಸಂಪಡ್ಕ, ಮಹಾಬಲ ಪಡುಬೆಟ್ಟು, ಬಾಲಕೃಷ್ಣ ಬಡ್ತಳ, ಸೋಮಪ್ಪ ಕೆ. ಸಹಕರಿಸಿದರು.

ಸಮ್ಮಾನ, ಪ್ರತಿಭಾ ಪುರಸ್ಕಾರ
ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಝುಬೈರ್‌ ಹಳೆನೇರೆಂಕಿ ಅವರ ಪರವಾಗಿ ತಂದೆ ಸಮೂನು ಬ್ಯಾರಿ, ಗಣೇಶ್‌ ಪಿ.ಕೆ. ಕೊಕ್ಕಡ, ವಸಂತಿ ಟಿ. ಕೈರೋಳಿ ನಿಡ್ಲೆ ಅವರನ್ನು ಸಮ್ಮಾನಿಸಲಾಯಿತು. ವೀಣಾ ಪಿ.ಎಸ್‌., ಗೋಣಿಗುಡ್ಡೆ, ಶ್ರದ್ಧಾ ಎಸ್‌. ದೋಂತಿಲ, ಸುಖೇಶ್‌ ಆರ್‌. ಶೆಟ್ಟಿ ಬೀದಿ ಪಡುಬೆಟ್ಟು, ಶ್ರದ್ಧಾ ಶೆಟ್ಟಿ ಬೀದಿ ಪಡುಬೆಟ್ಟು ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here