ಪುಂಜಾಲಕಟ್ಟೆ : ಬಂಟ್ವಾಳ ತಾ| ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಫೆ.20ರಿಂದ ಫೆ.25ರವರೆಗೆ ಜರಗಿದ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವವು ಸಂಪನ್ನಗೊಂಡಿತು.
ವೇ| ಮೂ| ಶ್ರೀಪಾದ ಪಾಂಗಣ್ಣಾಯ ತಂತ್ರಿಗಳ ನೇತೃತ್ವದಲ್ಲಿ, ಪ್ರಧಾನ ಅರ್ಚಕ ಅನಂತ ಮಹಿಮ ಮುಚ್ಚಿನ್ನಾಯ ಅವರ ಸಹಕಾರದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.
ಭಜನೆ, ಉತ್ಸವ, ನೇಮ ಫೆ.19ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಕೆರೆಮಜಲಿನಲ್ಲಿರುವ ದೇವರ ಜಳಕದ ಕೆರೆಯ ಶುದ್ಧಿ, ಫೆ.20ರಂದು ಪುಣ್ಯಾಹ ವಾಚನ, ಸಂಜೆ ಬಲಿ ಉತ್ಸವ, ಭಜನ ಕಾರ್ಯಕ್ರಮ, ಫೆ.21ರಂದು ಬೆಳಗ್ಗೆ ತ್ರಿಕಾಲ ಉತ್ಸವ, ಸಂಜೆ ಭಜನ ಕಾರ್ಯಕ್ರಮ, ಫೆ.22ರಂದು ಬೆಳಗ್ಗೆ ನಿತ್ಯೋತ್ಸವ, ಸಂಜೆ ಬಲಿ ಉತ್ಸವ, ಭಜನ ಕಾರ್ಯಕ್ರಮ,
ಫೆ.23ರಂದು ಮಹಾಚಂಡಿಕಾಯಾಗ, ದರ್ಶನ ಬಲಿ, ಬಟ್ಟಲು ಕಾಣಿಕೆ, ಸಂಜೆ ಭಜನ ಕಾರ್ಯಕ್ರಮ, ಕವಾಟ ಬಂಧನ, ಫೆ.24ರಂದು ಮಹಾ ಚಂಡಿಕಾಯಾಗ, ರಾತ್ರಿ ಧಾರ್ಮಿಕ ಸಭೆ, ಸಸಿಹಿತ್ಲು ಮೇಳದವರಿಂದ ಯಕ್ಷಗಾನ ಶ್ರೀ ದೇವಿ ಲೀಲಾಮೃತ, ದೈವಗಳ ನೇಮ, ಮಹಾರಥೋತ್ಸವ ಬಳಿಕ
ಧ್ವಜಾವರೋಹಣ ನಡೆಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ವ್ಯವಸ್ಥಾಪನ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.