Home ಧಾರ್ಮಿಕ ಸುದ್ದಿ ಒಮ್ಜೂರ್‌ ಹೋಲಿ ಫ್ಯಾಮಿಲಿ ಚರ್ಚ್‌: ಭ್ರಾತೃತ್ವದ ರವಿವಾರ

ಒಮ್ಜೂರ್‌ ಹೋಲಿ ಫ್ಯಾಮಿಲಿ ಚರ್ಚ್‌: ಭ್ರಾತೃತ್ವದ ರವಿವಾರ

1571
0
SHARE

ಮೇರೆಮಜಲು: ಇಲ್ಲಿನ ಒಮ್ಜೂರ್‌ ಹೋಲಿ ಫ್ಯಾಮಿಲಿ ಚರ್ಚ್‌ನಲ್ಲಿ ವಾರ್ಷಿಕ ಹಬ್ಬದ ಪ್ರಯುಕ್ತ ನ. 25ರಂದು ಭ್ರಾತೃತ್ವದ ರವಿವಾರ ಆಚರಿಸಲಾಯಿತು. ಬಿಜೈ ಲೂರ್ಡ್ಸ್‌ ಸೆಂಟ್ರಲ್‌ ಸ್ಕೂಲಿನ ಪ್ರಾಂಶು ಪಾಲ ಫಾ| ರಾಬರ್ಟ್‌ ಡಿ’ಸೋಜಾ ಪವಿತ್ರ ಬಲಿಪೂಜೆಯ ನೇತೃತ್ವ ವಹಿಸಿದ್ದರು.

ದೇವರೊಡನೆ ಒಂದಾಗಿ ಜೀವಿಸಿದರೆ ವೈಯಕ್ತಿಕವಾಗಿ ಹಾಗೂ ಸಮಾಜಕ್ಕೆ ಒಳಿತಾಗುವುದು. ಆದ್ದರಿಂದ ಭ್ರಾತೃತ್ವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಸಂದೇಶ ನೀಡಿದರು.

ಚರ್ಚ್‌ನ ಧರ್ಮಗುರು ವಂ| ಆಲ್ವಿನ್‌ ಡಿ’ಕುನ್ಹಾ ಮತ್ತು ವಂ| ನೆಲ್ಸನ್‌ ಡಿ’ಸೋಜಾ ಬಲಿಪೂಜೆಯಲ್ಲಿ ಪಾಲ್ಗೊಂಡರು. ಚರ್ಚ್‌ನ ವಾರ್ಷಿಕ ಹಬ್ಬದ ಪ್ರಯುಕ್ತ ಮೂರು ದಿನಗಳ ಸಂಭ್ರಮವು ಭ್ರಾತೃತ್ವದ ರವಿವಾರದ ಮೂಲಕ ಆರಂಭಗೊಂಡಿತು.

LEAVE A REPLY

Please enter your comment!
Please enter your name here