ಉಡುಪಿ : ಜಿಎಸ್ಬಿ ಸಮಾಜದ ಪ್ರತೀ ಮನೆಯಲ್ಲೂ ನಿತ್ಯ ಭಜನೆ ನಡೆಯಬೇಕೆನ್ನುವ ಉದ್ಧೇಶದಿಂದ ಸ್ಥಾಪಿಸಲಾದ ಘರ್ಘರಾಂತು ಭಜನಾಂತರಂಗ ತಂಡದಿಂದ ಪ್ರತೀ ರವಿವಾರ ಜಿಎಸ್ಬಿ ಸಮಾಜದ ಆಹ್ವಾನಿತರ ಮನೆಗೆ ತೆರಳಿ 1 ಗಂಟೆ ಉಚಿತವಾಗಿ ಭಜನೆ ನಡೆಸಿಕೊಂಡು ಬರುತ್ತಿದ್ದ 35ನೇ ವಾರದ ಭಜನ ಕಾರ್ಯಕ್ರಮವು ಒಳಕಾಡಿನ ರಾಧಾಕೃಷ್ಣ ರಾವ್ ಮನೆಯಲ್ಲಿ ನಡೆಯಿತು.
ಭಜನೆ ಬಳಿಕ ಮನೆಯ ಯಜಮಾನರಿಗೊಂದು ಜತೆ ತಾಳ, ದೇವರ ಪ್ರಸಾದ, ಭಜನೆ ಪುಸ್ತಕ, ಸಿ.ಡಿ. ನೀಡಿ, ಪ್ರತಿನಿತ್ಯ ಮನೆಯಲ್ಲಿ ಭಜನೆ ನಡೆಸುವುದಕ್ಕೆ ಪ್ರೇರೇಪಿಸಲಾಯಿತು. ರಾಧಾಕೃಷ್ಣ ರಾವ್ ದಂಪತಿ ದೀಪ ಬೆಳಗಿಸಿ ಚಾಲನೆ ನೀಡಿದರು. ಚೇಂಪಿ ರಾಮಚಂದ್ರ ಅನಂತ ಭಟ್ ಶುಭ ಹಾರೈಸಿದರು.
ಕಾರ್ಯಕ್ರಮ ಸಂಯೋಜಕರಾದ ರವೀಂದ್ರ ನಾಯಕ್, ಗಣೇಶ್ ಪೈ, ಜಯಂತ್ ನಾಯಕ್, ಗಣಪತಿ ಶ್ಯಾನುಭಾಗ್, ಶಾಲಿನಿ ಶೆಣೈ, ರಶ್ಮಿ ಶೆಣೈ, ಶಾಂತಾರಾಮ ಪೈ, ಅಕ್ಷತಾ ಶೆಣೈ, ಕಾವ್ಯಾ, ಶೈಲಾ ಕಾಮತ್, ತಬ್ಲಾ ವಾದಕ ಹರೀಶ್ ನಾಯಕ್, ಹಾರ್ಮೋನಿಯಂ ವಾದಕ ನಿತ್ಯಾನಂದ ನಾಯಕ್, ದೇವದಾಸ ಕಾಮತ್ ಉಪಸ್ಥಿತರಿದ್ದರು.
ಸಮಾಜದ ಏಳ್ಗೆಗಾಗಿ ಪ್ರತೀ ಮನೆಯಲ್ಲೂ ಧಾರ್ಮಿಕ ಶ್ರದ್ಧಾ ಭಾವನೆ ಬೆಳೆಸಲು ಭಜನೆಯೊಂದು ಪ್ರೇರಣ ಶಕ್ತಿಯಾಗಿ ಮೂಡಿಬಂದಿದ್ದು, ಸಮಾಜದ ಅನೇಕ ಕುಟುಂಬಸ್ಥರು ಸರದಿ ಸಾಲಿನಲ್ಲಿ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದಾರೆ. ಕಾರ್ಯಕ್ರಮ ಅಪೇಕ್ಷೆ ಪಡುವ ಸಮಾಜದವರು ಮೊ.ಸಂ. 9880834628 (ನಿತ್ಯಾನಂದ ನಾಯಕ್) ಅವರನ್ನು ಸಂಪರ್ಕಿಸಬಹುದೆಂದು ತಂಡದ ಪ್ರಕಟನೆ ತಿಳಿಸಿದೆ.