ನೀರ್ಚಾಲು: ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಕಾಮಗಾರಿಯನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಭೇಟಿಯಿತ್ತು ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕೆಲಸಕಾರ್ಯಗಳು ಅತಿ ಶೀಘ್ರವಾಗಿ ನಡೆಯುವಂತಾಗಲಿ ಎಂದು ಹರಸಿ ಮಂತ್ರಾಕ್ಷತೆಯನ್ನು ನೀಡಿದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಜಯದೇವ ಖಂಡಿಗೆ, ಗಣೇಶ ಕೃಷ್ಣ ಅಳಕ್ಕೆ, ಸುಬ್ರಹ್ಮಣ್ಯ ಭಟ್, ಕುಮಾರ, ಸುಧಾಮ ಮಾಸ್ಟರ್, ರಮೇಶ ಗುರುಸ್ವಾಮಿ ಹಾಗೂ ಭಕ್ತಾದಿಗಳು ಜತೆಗಿದ್ದರು.