ಒಡಿಯೂರು : ಶರೀರಕ್ಕೆ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಚಕ್ರಗಳು ಅಥವಾ ಕಂಬಗಳು. ಒಂದು ಕಂಬ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಧರ್ಮವೆಂಬ ಕಂಬ ಸಮರ್ಪಕವಾಗಿ ಆಚರಣೆಯಲ್ಲಿದ್ದಾಗ ಉಳಿದ ಕಂಬಗಳೆ ಲ್ಲವೂ ಸಮರ್ಪಕವಾಗಿರುತ್ತವೆ. ಅದು ಬದುಕಿನ ಯಶಸ್ಸು. ಆದುದರಿಂದ ಧರ್ಮದ ಆಧಾರದಲ್ಲಿ ಬದುಕಿನ ರಥ ಸಾಗಲಿ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಫೆ. 14 ಮತ್ತು 15ರಂದು ನಡೆಯಲಿರುವ ಶ್ರೀ ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆ 2019ರ ಪೂರ್ವಭಾವಿ ಸಭೆಯಲ್ಲಿ ಅವರು ಆಶೀರ್ವಚನ ನೀಡಿ, ಫೆ. 14ರಂದು ತುಳು ಬದ್ಕ್ದ ನೆಲೆ ಬಿಲೆ ಎಂಬ ಕಾರ್ಯಕ್ರಮ ನಡೆಯಲಿದೆ. ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದರು.