Home ಧಾರ್ಮಿಕ ಸುದ್ದಿ ‘ಅಂತರಂಗದ ಹದಗೊಳಿಸುವಿಕೆ ಆತ್ಮೋನ್ನತಿಯ ದಾರಿ’

‘ಅಂತರಂಗದ ಹದಗೊಳಿಸುವಿಕೆ ಆತ್ಮೋನ್ನತಿಯ ದಾರಿ’

1416
0
SHARE

ಒಡಿಯೂರು:ಹೊರಾಂಗಣ – ಒಳಾಂಗಣ ಆಟಗಳಂತೆಯೇ ಮಾನವನ ಅಂತರಂಗ ಬಹಿರಂಗಗಳಲ್ಲಿಯೂ ವ್ಯಾಯಾಮ ನಡೆಯಬೇಕು. ಕ್ರೀಡೆ ಯಲ್ಲಿ ಶರೀರಕ್ಕೆ ವ್ಯಾಯಾಮ ಸಿಗುತ್ತದೆ. ಆಧ್ಯಾತ್ಮಿಕ ಚಿಂತನೆ ಮೂಲಕ ಮನಸ್ಸಿಗೂ ವ್ಯಾಯಾಮ ನೀಡಬೇಕು. ಅಂತರಂಗದ ಹದಗೊಳಿಸುವಿಕೆಯೇ ಆತ್ಮೋನ್ನತಿಯ ದಾರಿ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ತಿಳಿಸಿದರು. ಅವರು ರವಿವಾರ ಗ್ರಾಮೋತ್ಸವ ಅಂಗವಾಗಿ ಏರ್ಪಡಿಸಿದ ಹೊರಾಂಗಣ ಸ್ಪರ್ಧೆಗಳನ್ನು ಒಡಿಯೂರು ಕ್ಷೇತ್ರದ ಕ್ರೀಡಾಂಗಣದಲ್ಲಿ ಉದ್ಘಾಟಿಸಿ, ಗ್ರಾಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಸಾಧ್ವಿ ಮಾತಾನಂದಮಯೀ ಉಪಸ್ಥಿತರಿದ್ದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ, ಒಡಿಯೂರು ತುಳು ಕೂಟದ ಅಧ್ಯಕ್ಷ ಎಚ್‌.ಕೆ. ಪುರುಷೋತ್ತಮ್‌, ಒಡಿಯೂರು ಶ್ರೀ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಸುರೇಶ್‌ ರೈ ಅಂಕತ್ತಡ್ಕ, ನಿರ್ದೇಶಕರಾದ ವೇಣುಗೋಪಾಲ ಮಾರ್ಲ, ಬಿ.ಕೆ. ಚಂದ್ರಶೇಖರ, ಮಂಗಳೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಜಯಂತ್‌ ಜೆ. ಕೋಟ್ಯಾನ್‌, ಒಡಿಯೂರು ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್‌, ಮುಖ್ಯ ಶಿಕ್ಷಕ ಜಯಪ್ರಕಾಶ್‌ ಶೆಟ್ಟಿ, ತೀರ್ಪುಗಾರರಾದ ಸುರೇಶ್‌ ಗೌಡ, ರಾಜಗೋಪಾಲ್‌, ಉಡುಪಿ ವಲಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಉಡುಪಿ ವಜ್ರಮಾತಾ ಮಹಿಳಾ ಘಟಕಾಧ್ಯಕ್ಷೆ ಶೋಭಾ ಶೆಟ್ಟಿ, ಕಾರ್ಯದರ್ಶಿ ಅಮಿತಾ ಗಿರೀಶ್‌, ವಾಸುದೇವ ಆರ್‌. ಕೊಟ್ಟಾರಿ, ಯಶವಂತ ವಿಟ್ಲ, ಲಿಂಗಪ್ಪ ಗೌಡ ಪನೆಯಡ್ಕ, ಬಬಿತಾ ಶೆಟ್ಟಿ, ಸದಾಶಿವ ಶೆಟ್ಟಿ ಒಡಿಯೂರು, ದೈಹಿಕ ಶಿಕ್ಷಣ ಶಿಕ್ಷಕ ಉದಯ ಕುಮಾರ್‌ ರೈ ಮೊದಲಾದವರು ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ಸ್ವಾಗತಿಸಿ, ನಿರೂಪಿಸಿದರು.

ಮಹಿಳೆಯರಿಗೆ ತ್ರೋಬಾಲ್‌ (7 ಜನರ ತಂಡ), ಹಗ್ಗಜಗ್ಗಾಟ (7 ಜನರ ತಂಡ), ಶಟಲ್‌ ಬ್ಯಾಡ್ಮಿಂಟನ್‌ (ಡಬಲ್ಸ್‌), 6ರಿಂದ 10ನೇ ತರಗತಿಯವರೆಗಿನ ಬಾಲಕಿಯರಿಗೆ ಟೊಂಕ (9 ಜನರ ತಂಡ), 100 ಮೀ. ಓಟ, ಶಟಲ್‌ ಬ್ಯಾಡ್ಮಿಂಟನ್‌ (ಡಬಲ್ಸ್‌), ಬಾಲಕರಿಗೆ ವಾಲಿಬಾಲ್‌ (7 ಜನರ ತಂಡ), 100 ಮೀ. ಓಟ, ಶಟಲ್‌ ಬ್ಯಾಡ್ಮಿಂಟನ್‌ (ಡಬಲ್ಸ್‌), 1ರಿಂದ 5ನೇ ತರಗತಿಯ ಮಕ್ಕಳಿಗೆ ಕೆರೆದಡ, ಕಪ್ಪೆ ಜಿಗಿತ, ಬಾಲ್‌ ಪಾಸ್‌, ಯಾವುದಾದರೂ 3 ನೈಮಿತ್ತಿಕ ಶ್ಲೋಕ ಹೇಳುವ ಸ್ಪರ್ಧೆಗಳು ನಡೆದವು.

ಮಾನವೀಯ ಮೌಲ್ಯದ ಕೊಂಡಿ
ಶಿಸ್ತು, ಸಂಯಮ, ಚಾರಿತ್ರ್ಯ ಪ್ರಜ್ಞಾವಂತ ನಾಗರಿಕನನ್ನಾಗಿಸುತ್ತದೆ. ಪ್ರಜ್ಞಾವಂತ ಪ್ರಜೆಗಳಿದ್ದರೆ ಆದರ್ಶ ರಾಷ್ಟ್ರ ನಿರ್ಮಾಣವಾಗುತ್ತದೆ. ಗ್ರಾಮದ ಉತ್ಸವ ಅಥವಾ ಗ್ರಾಮದ ಪರಿವರ್ತನೆಯೆಂದರೆ ರಾಷ್ಟ್ರದ ಉತ್ಸವ ಮತ್ತು ರಾಷ್ಟ್ರದ ಪರಿವರ್ತನೆ. ಕ್ರೀಡೆ ದೈಹಿಕ ಬೆಳವಣಿಗೆಯನ್ನು ಸಾಧಿಸುತ್ತದೆ. ಕ್ರೀಡೋತ್ಸವವು ಮಾನವೀಯ ಮೌಲ್ಯದ ಕೊಂಡಿಯಾಗಿದೆ.
-ಗುರುದೇವಾನಂದ ಶ್ರೀ, ಒಡಿಯೂರು

LEAVE A REPLY

Please enter your comment!
Please enter your name here