Home ಧಾರ್ಮಿಕ ಸುದ್ದಿ  ಒಡಿಯೂರು: ಲಲಿತಾ ಪಂಚಮಿ, ಚಂಡಿಕಾ ಮಹಾಯಾಗ

 ಒಡಿಯೂರು: ಲಲಿತಾ ಪಂಚಮಿ, ಚಂಡಿಕಾ ಮಹಾಯಾಗ

1878
0
SHARE

ವಿಟ್ಲ: ಕಲೆ, ಸಾಹಿತ್ಯ, ಸಂಗೀತ ಮನಸ್ಸಿಗೆ ಆನಂದ ನೀಡುತ್ತದೆ. ಅಂತರಂಗ, ಬಹಿರಂಗ ಉದ್ದೀಪನಗೊಳಿಸಲು ರಂಗನ ಅನುಗ್ರಹ ಅಗತ್ಯ. ಒಳಗಣ್ಣು ತೆರೆದು ಭಗವಂತನನ್ನು ಕಾಣಬೇಕು. ಅದು ಸುಖ, ಶಾಂತಿ, ನೆಮ್ಮದಿ ನೀಡುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಶನಿವಾರ ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ, ಶ್ರೀ ಚಂಡಿಕಾ ಮಹಾಯಾಗದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಕಲಾದೇವಿಯ ಸೇವೆ ಸಲ್ಲಿಸಿದ ಮಹನೀಯರಿಗೆ ಶ್ರೀ ಗುರುದೇವಾನುಗ್ರಹ ಪುರಸ್ಕಾರ ನೀಡಿ ಆಶೀರ್ವಚನ ನೀಡಿದರು.

ಸಾ ಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ, ಲೌಕಿಕ – ಅಲೌಕಿಕ ಸಂಪತ್ತನ್ನು ಕರುಣಿಸುವವಳು ಜಗನ್ಮಾತೆ. ಕಲಾವಿದ ಮತ್ತು ಕಲೆಗೆ ತಾಯಿ ಮಕ್ಕಳ ಸಂಬಂಧವಿದೆ ಎಂದರು.
ಸಾಧಕರಿಗೆ ಸಮ್ಮಾನ ಸ್ವಾಮೀಜಿಯವರು ಯಕ್ಷಗಾನ ಶಿಕ್ಷಕ ಕರ್ಗಲ್ಲು ವಿಶ್ವೇಶ್ವರ ಭಟ್‌, ಯಕ್ಷಗಾನ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ, ತುಳು ರಂಗಭೂಮಿ ಮತ್ತು ಚಲನಚಿತ್ರ ಸಂಗೀತ ನಿರ್ದೇಶಕ ಎ.ಕೆ. ವಿಜಯ್‌ ಕೋಕಿಲ, ಕಾಟಿಪಳ್ಳ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಮಂಡಳಿ ನಿರ್ದೇಶಕಿ ಪೂರ್ಣಿಮಾ ಯತೀಶ್‌ ರೈ, ನಾಟ್ಯವಿದುಷಿ ಸುನೀತಾ ಜಯಂತ್‌ ಉಳ್ಳಾಲ ಅವರಿಗೆ ಶ್ರೀ ಗುರುದೇವಾನುಗ್ರಹ ಪುರಸ್ಕಾರ ನೀಡಿ ಗೌರವಿಸಿದರು. ದಾವಣಗೆರೆ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ 11ನೇ ವಾರ್ಷಿಕೋತ್ಸವ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಉದ್ಯಮಿ ವಾಮಯ್ಯ ಶೆಟ್ಟಿ ಚೆಂಬೂರು, ರೇವತಿ ವಿ. ಶೆಟ್ಟಿ ಉಪಸ್ಥಿತರಿದ್ದರು.

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಪ್ರ. ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಪ್ರಸ್ತಾವಿಸಿದರು. ಶರತ್‌ ಆಳ್ವ, ಸುಖೇಶ್‌ ಭಂಡಾರಿ, ಯಶವಂತ, ವೀûಾ, ಲೀಲಾ ಸಮ್ಮಾನಿತರನ್ನು ಪರಿಚಯಿ ಸಿದರು. ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ರೇಣುಕಾ ಎಸ್‌. ರೈ ಆಶಯಗೀತೆ ಹಾಡಿ ದರು. ಬಂಟ್ವಾಳ ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ವಂದಿಸಿ, ವಿದ್ಯಾಪೀಠದ ಮುಖ್ಯ ಶಿಕ್ಷಕ ಎ. ಜಯಪ್ರಕಾಶ್‌ ಶೆಟ್ಟಿ ನಿರೂಪಿಸಿದರು.

ವಿವಿಧ ಕಾರ್ಯಕ್ರಮ
ಗಣಪತಿ ಹವನ, ಶ್ರೀ ವಜ್ರ ಮಾತೆಗೆ ಕಲೊ³àಕ್ತ ಪೂಜೆ, ಶ್ರೀ ಚಂಡಿಕಾ ಮಹಾಯಾಗದ ಪೂರ್ಣಾಹುತಿ, ಮಹಾಪೂಜೆ, ಮಧ್ಯಾಹ್ನ ಪುತ್ತೂರು  ಧೀ ಶಕ್ತಿ ಮಹಿಳಾ ಯಕ್ಷ ಬಳಗದಿಂದ ವೃದ್ಧಾಂಜನೇಯ ಯಕ್ಷಗಾನ ತಾಳಮದ್ದಳೆ, ಸಂಜೆ ಸಾಮೂಹಿಕ ಸ್ವಯಂವರ ಪಾರ್ವತೀ ಪೂಜೆ, ಅಷ್ಟಾವಧಾನ ಸೇವೆ, ರಾತ್ರಿ ರಂಗಪೂಜೆ, ಭದ್ರಕಾಳಿಗೆ ವಿಶೇಷ ಪೂಜೆ ನಡೆಯಿತು.

LEAVE A REPLY

Please enter your comment!
Please enter your name here