Home ಧಾರ್ಮಿಕ ಸುದ್ದಿ ಒಡಿಯೂರು: ದತ್ತಜಯಂತಿ, ದತ್ತಮಾಲಾಧಾರಣೆ

ಒಡಿಯೂರು: ದತ್ತಜಯಂತಿ, ದತ್ತಮಾಲಾಧಾರಣೆ

606
0
SHARE

ವಿಟ್ಲ : ದತ್ತ ಮಾಲಾಧಾರಣೆ ತ್ಯಾಗಕ್ಕೆ ಬದ್ಧರಾಗಿರುವುದನ್ನು ಸಾರುತ್ತದೆ. ರುದ್ರಾಕ್ಷಿಗೆ ರೋಗ ನಿವಾರಣೆ ಮಾಡುವ ಬಲವಿದೆ. ಮಾಲಾಧಾರಣೆ ಎಲ್ಲರೂ ಮಾಡಬಹುದು. ಆತ್ಮತತ್ವಕ್ಕೆ ಲಿಂಗಬೇಧವಿಲ್ಲ. ಅಂಧಕಾರ ವನ್ನು ಹೋಗಲಾಡಿಸುವ ಗುರು ಭವಸಾಗರವನ್ನು ದಾಟಿಸುತ್ತಾನೆ. ಆಧ್ಯಾತ್ಮ ತತ್ತÌ ಅಳವಡಿಸಿ ಕೊಂಡರೆ ಮಾನವನಾಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ರವಿವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ದತ್ತಜಯಂತಿ ಮಹೋತ್ಸವದಂಗವಾಗಿ ಶ್ರೀ ದತ್ತಮಾಲಾಧಾರಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಊರ-ಪರವೂರಿನ, ಹೊರರಾಜ್ಯಗಳ ಅನೇಕ ಮಂದಿ ಗುರುಭಕ್ತರು ಶ್ರೀ ದತ್ತ ಮಾಲಾಧಾರಣೆ ಮಾಡಿದರು. ಒಡಿಯೂರು ಸಾಧ್ವಿ ಮಾತಾನಂದಮಯೀ ದಿವ್ಯ ಸಾನ್ನಿಧ್ಯ ಕರುಣಿಸಿದ್ದರು. ವೇ| ಮೂ| ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಶ್ರೀ ದತ್ತ ಮಹಾಯಾಗವು ಆರಂಭಗೊಂಡಿತು. ಶ್ರೀ ಗುರುಚರಿತಾಮೃತ ಪ್ರವಚನವನ್ನು ವಿ.ಬಿ. ಹಿರಣ್ಯ ಅವರು ನಡೆಸಿದರು.

 ಸತ್ಯದೆಡೆಗೆ ಗುರುತತ್ತ, ಪರತತ್ತÌ ಬಗ್ಗೆ ಚಿಂತನೆ ಮಾಡುವ ನಿಟ್ಟಿನಲ್ಲಿ ಪ್ರವಚನ ನಡೆಯುತ್ತವೆ. ವಿಚಾರಗಳನ್ನು ಪ್ರಚಾರಗೊಳಿಸುವ ಪ್ರಯತ್ನಗಳು ನಡೆಯುತ್ತವೆ. ಗುರುಚರಿತಾಮೃತ ಮನುಷ್ಯನ ಸತ್‌ಚಾರಿತ್ರ್ಯ ನಿರ್ಮಾಣಕ್ಕೆ ಬುನಾದಿ ಇದ್ದಂತೆ. ಅಸತ್ಯದಿಂದ ಸತ್ಯದೆಡೆಗೆ ನಡೆಯಬೇಕೆಂಬ ಸಂದೇಶ ನೀಡುತ್ತದೆ. ಆತ್ಮತತ್ತÌ ಎನ್ನುವಂತಹದ್ದು, ಪ್ರೇಮತತ್ತÌವಾಗಿದ್ದು, ಕಲ್ಮಶ – ದ್ವೇಷಕ್ಕೆ ಎಡೆ ಇರುವುದಿಲ್ಲ. ಎಲ್ಲರನ್ನು ಉದ್ಧರಿಸುವುದಕ್ಕೆ ಗುರು ದೇವರು ಪ್ರೇರಣೆ ನೀಡಲಿ.
ಗುರುದೇವಾನಂದ ಶ್ರೀ ಒಡಿಯೂರು

LEAVE A REPLY

Please enter your comment!
Please enter your name here