Home ಧಾರ್ಮಿಕ ಸುದ್ದಿ ಒಡಿಯೂರು ತುಳುನಾಡು ಜಾತ್ರೆಗೆಹಸಿರು ಹೊರೆಕಾಣಿಕೆ ಸಮರ್ಪಣೆ

ಒಡಿಯೂರು ತುಳುನಾಡು ಜಾತ್ರೆಗೆಹಸಿರು ಹೊರೆಕಾಣಿಕೆ ಸಮರ್ಪಣೆ

582
0
SHARE
ಹಸಿರು ಹೊರೆಕಾಣಿಕೆಗೆ ಡಾ| ಹರಪ್ರಸಾದ್‌ ತುದಿಯಡ್ಕ ಚಾಲನೆ ನೀಡಿದರು.

ಸುಳ್ಯ : ಒಡಿಯೂರಿನಲ್ಲಿ ಜ. 26 ಮತ್ತು 27ರಂದು ನಡೆಯಲಿರುವ ತುಳುನಾಡ ಜಾತ್ರೆ ಒಡಿಯೂರು ರಥೋತ್ಸವಕ್ಕೆ ಇಲ್ಲಿನ ಜೈ ಗುರುದೇವಾ ಸೇವಾ ಬಳಗದ ವತಿಯಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆಗೆ ಮಂಗಳವಾರ ಚೆನ್ನಕೇಶವ ದೇಗುಲದ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ದೇವಾಲಯದ ಆನುವಂಶಿಕ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್‌ ತುದಿಯಡ್ಕ ತೆಂಗಿನಕಾಯಿ ಒಡೆದು ಚಾಲನೆ ನೀಡಿ ಮಾತನಾಡಿ, ಒಡಿಯೂರಿನ ತುಳುನಾಡ ಜಾತ್ರೆಗೆ ಆಗಮಿಸುವ ಭಕ್ತರಿಗೆ ಈ ಹಸಿರುವಾಣಿ ಪ್ರಸಾದ ರೂಪದಲ್ಲಿ ದೊರೆಯುತ್ತದೆ. ಇಂತಹ ಕಾರ್ಯದಿಂದ ಎಲ್ಲರಿಗೂ ಶ್ರೇಯಸ್ಸು ಸಿಗುತ್ತದೆ ಎಂದರು. ನಗರ ಪಂ. ಮಾಜಿ ಅಧ್ಯಕ್ಷ ಎನ್‌.ಎ. ರಾಮಚಂದ್ರ ಶುಭ ಹಾರೈಸಿದರು. ಗುರುದೇವ ಸೇವಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಪಕ್ಕಳ, ಸಮಿತಿಯ ಗಂಗಾಧರ ಮಣಿಯಾಣಿ, ರಾಮದಾಸ ಕೇರ್ಪಳ, ಜೆ.ಕೆ. ರೈ ಸುಳ್ಯ, ಜಯಂತ ಶೆಟ್ಟಿ, ಸುಳ್ಯ ಸಿ.ಎ. ಬ್ಯಾಂಕ್‌ ಅಧ್ಯಕ್ಷ ಸುಬೋಧ್‌ ಶೆಟ್ಟಿ ಮೇನಾಲ, ಶಾಂತಪ್ಪ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here