Home ಧಾರ್ಮಿಕ ಸುದ್ದಿ ಓಡೀಲು: ಧಾರ್ಮಿಕ ಸಭೆ

ಓಡೀಲು: ಧಾರ್ಮಿಕ ಸಭೆ

297
0
SHARE

ಬೆಳ್ತಂಗಡಿ: ನಮ್ಮ ಮನದೊಳಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಮಾತ್ರ ದೇವರ ಅನುಗ್ರಹ ಲಭಿಸಲು ಸಾಧ್ಯ ಎಂದು ಉಡುಪಿ ಪೇಜಾವರ ಮಠದ ಕಿರಿಯ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಅವರು ರವಿವಾರ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ಭೂಮಂಡಲಕ್ಕೆ ಅಧಿಪತಿಯಾಗಿರುವ ದೇವರು ನಮ್ಮಲ್ಲಿನ ಸಂಪತ್ತಿಗೂ ಒಡೆಯನಾಗಿರುತ್ತಾನೆ. ನಾವು ಸಂಪತ್ತಿದೆ ಎಂದು ಮೆರೆದಾಡಿದರೆ ದೇವರ ಅನುಗ್ರಹ ಸಿಗಲು ಸಾಧ್ಯವಿಲ್ಲ ಎಂದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಣೇಶ್‌ ಸುವರ್ಣ, ಪ್ರಧಾನ ಅರ್ಚಕ ರಘರಾಮ್‌ ಭಟ್ ಮಠ, ಜಿ.ಪಂ. ಸದಸ್ಯೆ ಮಮತಾ ಎಂ.ಶೆಟ್ಟಿ, ಪಡಂಗಡಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷ ಸಂತೋಷ್‌ ಕುಮಾರ್‌ ಜೈನ್‌, ಜಾತ್ರೆ ಸಮಿತಿಯ ಗೌರವಾಧ್ಯಕ್ಷ ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಅಧ್ಯಕ್ಷ ಸಂತೋಷ್‌ ಶೆಟ್ಟಿ ಪುರಿಪಟ್ಟ, ಪ್ರಧಾನ ಕಾರ್ಯದರ್ಶಿ ಸುಕೇಶ್‌ ಪೂಜಾರಿ ಓಡೀಲು ಉಪಸ್ಥಿತರಿದ್ದರು.

ಅಶ್ವಿ‌ತ್‌ ಎಂ. ಓಡೀಲು ಸ್ವಾಗತಿಸಿ, ಚಂದ್ರಪ್ಪ ವಂದಿಸಿದರು. ಯುವರಾಜ್‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here