Home ಧಾರ್ಮಿಕ ಸುದ್ದಿ ಒಡ್ಡೂರು ಫಾರ್ಮ್ ಹೌಸ್‌ : ಧರ್ಮನೇಮ ಸಮಾಪನ

ಒಡ್ಡೂರು ಫಾರ್ಮ್ ಹೌಸ್‌ : ಧರ್ಮನೇಮ ಸಮಾಪನ

465
0
SHARE
ಒಡ್ಡೂರು ಧರ್ಮಚಾವಡಿ ಮುಂಭಾಗ ಶನಿವಾರ ರಾತ್ರಿ ಧರ್ಮನೇಮ ಜರಗಿತು

ಬಂಟ್ವಾಳ : ಗಂಜಿಮಠ ಒಡ್ಡೂರು ಫಾರ್ಮ್ ಹೌಸ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡ ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮದೈವದ ಪ್ರತಿಷ್ಠೆ, ಶತಚಂಡಿಕಾಯಾಗ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ರಾತ್ರಿ ನಡೆದ ಶ್ರೀ ಕೊಡಮಣಿತ್ತಾಯ ಧರ್ಮದೈವದ ಧರ್ಮನೇಮದೊಂದಿಗೆ ಸಮಾಪನಗೊಂಡಿತು.

ಒಡ್ಡೂರು ಫಾರ್ಮ್ ಮಾಲಕ, ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿ ಗುತ್ತು ಅವರ ನೇತೃತ್ವದಲ್ಲಿ ಶನಿವಾರ ಮುಂಜಾನೆಯಿಂದಲೇ ಆರಂಭಗೊಂಡಿದ್ದ ಶತಚಂಡಿಕಾಯಾಗವು ಮಧ್ಯಾಹ್ನ ಪೂರ್ಣಾಹುತಿಗೊಂಡು, ರಾತ್ರಿಯಿಡೀ ಧರ್ಮ ನೇಮ ನಡೆಯಿತು. ಈ ಕಾರ್ಯದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ಧರ್ಮನೇಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್‌ ಕಟೀಲು,ಶಾಸಕರಾದ ಸಂಜೀವ ಮಠಂದೂರು, ಸುನೀಲ್‌ಕುಮಾರ್‌, ಹರೀಶ್‌ ಪೂಂಜ, ಡಾ| ವೈ. ಭರತ್‌ ಶೆಟ್ಟಿ, ರಘುಪತಿ ಭಟ್‌, ಕಟೀಲು ಕ್ಷೇತ್ರದ ಅನಂತಪದ್ಮನಾಭ ಆಸ್ರಣ್ಣ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಾಜಿ ಸಚಿವರಾದ ಬಿ. ನಾಗರಾಜ ಶೆಟ್ಟಿ, ಕೆ.ಅಭಯಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ ಪಾಲ್ಗೊಂಡಿದ್ದರು. ರಾತ್ರಿ ವೇಳೆಯೂ ಸಹಸ್ರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರು ಆಗಮಿಸುವ ಭಕ್ತರಿಗೆ ಸಕಲ ವ್ಯವಸ್ಥೆಗಳನ್ನು ಕಲ್ಪಿಸಿದ್ದರು. ಉಳಿಪ್ಪಾಡಿಗುತ್ತು ಕುಟುಂಬದ ಸದಸ್ಯರು ಸೇರಿದಂತೆ ಶಾಸಕರ ಹಿತೈಷಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here