Home ಧಾರ್ಮಿಕ ಸುದ್ದಿ ನ್ಯಾರ್ಮ ಧರ್ಮಜಾರಂದಾಯ ವಾರ್ಷಿಕ ನೇಮ ಸಂಪನ್ನ

ನ್ಯಾರ್ಮ ಧರ್ಮಜಾರಂದಾಯ ವಾರ್ಷಿಕ ನೇಮ ಸಂಪನ್ನ

1750
0
SHARE

ಶಿರ್ವ : ಇತಿಹಾಸ ಪ್ರಸಿದ್ಧ ಶಿರ್ವ ನ್ಯಾರ್ಮ ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ವಾರ್ಷಿಕ ನೇಮವು ಶನಿವಾರ ನಡಿಬೆಟ್ಟಿನ ನೇಮ ಮತ್ತು ರವಿವಾರ ಊರಿನ ನೇಮದೊಂದಿಗೆ ಸಂಪನ್ನಗೊಂಡಿತು. ವಾಡಿಕೆಯಂತೆ ಸುಗ್ಗಿ ಹುಣ್ಣಿಮೆಯಂದು ಶಿರ್ವ ನಡಿಬೆಟ್ಟಿನ ನೇಮ ಜರಗಿದ್ದು ರವಿವಾರ ಊರಿನ ನೇಮದಂದು ಮಧ್ಯಾಹ್ನ ದೈವದರ್ಶನ ನಡೆಯಿತು.

ಬಳಿಕ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಿದರು. ಸಂಪ್ರದಾಯದಂತೆ ಶನಿವಾರ ರಾತ್ರಿ ಶಿರ್ವ ನಡಿಬೆಟ್ಟು ಕುಟುಂಬಸ್ಥರ ವತಿಯಿಂದ ನಡಿಬೆಟ್ಟಿನ ನೇಮ ನಡೆದು ಕುಟುಂಬಸ್ಥರು ಭಾಗವಹಿಸಿದ್ದರು. ರವಿವಾರ ರಾತ್ರಿ ಊರಿನ ನೇಮ ನಡೆದು ಶ್ರೀ ಧರ್ಮ ಜಾರಂದಾಯ ದೈವವು ಕುದುರೆ ಸವಾರಿಯಲ್ಲಿ ವಿಷ್ಣುಮೂರ್ತಿ ದೇವರ ಭೇಟಿ ಮಾಡಿದ ಬಳಿಕ ಶಿರ್ವ ನಡಿಬೆಟ್ಟು ಬಬ್ಬುಸ್ವಾಮಿಯ ಭೇಟಿ ನಡೆದು ಗ್ರಾಮದ ಸಂರಕ್ಷಣೆಯ ಅಭಯದೊಂದಿಗೆ ಸಂಪನ್ನಗೊಂಡಿತು. ಹಿರಿಯರಾದ ಶಿರ್ವ ನಡಿಬೆಟ್ಟು ಸೀತಾರಾಮ ಹೆಗ್ಡೆ, ಆಡಳಿತ ಮಂಡಳಿಯ ಅಧ್ಯಕ್ಷ ನಡಿಬೆಟ್ಟು ನಿತ್ಯಾನಮದ ಹೆಗ್ಡೆ, ಕಾರ್ಯದರ್ಶಿ ವಿ.ಸುಬ್ಬಯ್ಯ ಹೆಗ್ಡೆ,ಕೋಶಾಧಿಕಾರಿ ಕುಶ ಶೆಟ್ಟಿ, ಸೊರ್ಕಳ ಸಚ್ಚಿದಾನಂದ ಹೆಗ್ಡೆ, ದೈವಸ್ಥಾನದ ಅರ್ಚಕ ಸಾನದ ಮನೆ ರವೀಂದ್ರ ಶೆಟ್ಟಿ, ಆನಂದ ಪೂಜಾರಿ ಮಿತ್ರಬೆಟ್ಟು,ಸ್ಥಳವಂದಿಗರು,ಭಕ್ತವೃಂದ, ಗ್ರಾಮಸ್ಥರು ಉಪಸ್ಥಿತರಿದ್ದರು. ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಭಕ್ತಾದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here