Home ಧಾರ್ಮಿಕ ಸುದ್ದಿ ಸಂತ ಆಂತೋನಿ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ನೊವೇನ ಪ್ರಾರ್ಥನೆ ಆರಂಭ

ಸಂತ ಆಂತೋನಿ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ನೊವೇನ ಪ್ರಾರ್ಥನೆ ಆರಂಭ

1688
0
SHARE
ಸಂತ ಆಂತೋನಿ ಪುಣ್ಯ ಸ್ಮರಣಿಕೆಗಳ ಹಬ್ಬ ಜರಗಿತು.

ಮಹಾನಗರ : ಮಿಲಾಗ್ರಿಸ್‌ ಚರ್ಚ್‌ನಲ್ಲಿ ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ಪೂರ್ವ ತಯಾರಿಯಾಗಿ ಒಂಬತ್ತು ದಿನಗಳ ನೊವೇನ ಪ್ರಾರ್ಥನೆಯ ಪ್ರಾರಂಭ ಮಂಗಳವಾರ ಸಂಜೆ ವಾಹನಗಳ ಮೆರವಣಿಗೆ ಮತ್ತು ಧ್ವಜಾರೋಹಣದೊಂದಿಗೆ ನೆರವೇರಿತು.

ಜಪ್ಪು ಸಂತ ಆಂತೋನಿ ಆಶ್ರಮದಿಂದ ಕಂಕನಾಡಿ, ಫಳ್ನೀರ್‌ ದಾರಿಯಾಗಿ ಮಿಲಾಗ್ರಿಸ್‌ ಚರ್ಚ ತನಕ ಸಾಲಂಕೃತ ಸಂತ ಆಂತೋನಿ ಅವರ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಬಳಿಕ ವಂ| ಫ್ರಾಂಕ್ಲಿನ್‌ ಡಿ’ಸೋಜಾ ಅವರು ಧ್ವಜಾರೋಹಣ ಮಾಡಿದರು.

ಶಿಮೊಗ್ಗ ಧರ್ಮಪ್ರಾಂತದ ವಂ| ಫ್ರಾಂಕ್ಲಿನ್‌ ಡಿ’ಸೋಜಾ ಅವರು ಮೊದಲ ದಿನದ ಬಲಿಪೂಜೆಯನ್ನು ಧಾರ್ಮಿಕ ವ್ಯಕ್ತಿಗಳಿಗಾಗಿ ಅರ್ಪಿಸಿದರು. ಧಾರ್ಮಿಕ ವ್ಯಕ್ತಿಗಳು ಯೇಸುಸ್ವಾಮಿಯ ಕರೆಗೆ ಓಗೊಟ್ಟು ಪ್ರಪಂಚದ ವಿವಿಧ ಕಡೆಗಳಲ್ಲಿ ತಮ್ಮನ್ನೇ ತೊಡಗಿಸಿಕೊಂಡು ದುಡಿಯುತ್ತಾರೆ ಎಂದ ಅವರು ಧಾರ್ಮಿಕ ವ್ಯಕ್ತಿಗಳಿಗಾಗಿ ದೇವರಲ್ಲಿ ಪ್ರಾರ್ಥಿಸೋಣ ಎಂದರು.

ಆಶ್ರಮದ ನಿರ್ದೇ ಶಕರಾದ ವಂ| ಒನಿಲ್‌ ಡಿ’ಸೋಜಾ ಅವರು ಮೊದಲ ದಿನದ ನೊವೇನ ಪ್ರಾರ್ಥನೆ ನಡೆಸಿಕೊಟ್ಟರು. ವಂ| ಫ್ರಾನ್ಸಿಸ್‌ ಡಿ’ಸೋಜಾ, ಫಾ| ಪೀಟರ್‌ ಗೊನ್ಸಾಲ್ವಿಸ್‌ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here