Home ಧಾರ್ಮಿಕ ಸುದ್ದಿ ‘ ಧರ್ಮ, ಸತ್ಯ ಪಥದಲ್ಲಿದ್ದಾಗ ಆಪತ್ತುಗಳಿಲ್ಲ’

‘ ಧರ್ಮ, ಸತ್ಯ ಪಥದಲ್ಲಿದ್ದಾಗ ಆಪತ್ತುಗಳಿಲ್ಲ’

1648
0
SHARE

ವಿಟ್ಲ : ವಾರ್ಷಿಕೋತ್ಸವ ನಿಮಿತ್ತ ಮಾತ್ರ. ಮುಖ್ಯ ಉದ್ದೇಶ ಮಠ, ಹೋಬಳಿಯ ಶಿಷ್ಯಭಕ್ತರನ್ನು ಬೆಸೆಯುವ ಸೂತ್ರವಾಗಿದೆ. ಮಠ, ಗುರು ಇಲ್ಲವಾದರೆ ಬದುಕಿಗೆ ಅರ್ಥ ಬರುವುದಿಲ್ಲ. ಮಾಣಿ ಮಠ ಮಂಗಳೂರು ಹೋಬಳಿಯ ಬೇರು. ಬದ್ಧ್ದತೆ-ಸಿದ್ಧತೆಗೆ ಮಂಗಳೂರು ಹೋಬಳಿ ಮಾದರಿ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.

ಅವರು ಮಾಣಿ ಪೆರಾಜೆ ಶ್ರೀರಾಮ ಚಂದ್ರಾಪುರ ಮಠದಲ್ಲಿ ಮಂಗಳೂರು ಹೋಬಳಿ, ಶ್ರೀರಾಮ ಸಂಸ್ಕೃತ ವೇದ ಪಾಠಶಾಲೆಯ ವಾರ್ಷಿಕೋತ್ಸವದ ಧರ್ಮ ಸಭೆಯಲ್ಲಿಆಶೀರ್ವಚನ ನೀಡಿದರು.

ಸಾಧಕರಾದ ವೆಂಕಟೇಶಮೂರ್ತಿ ಕೆ., ಡಾ| ಕೆ. ಮಹೇಶ್‌, ಪ್ರದೀಪ್‌ಶಂಕರ್‌ ಎಂ., ಪ್ರಮೋದ್‌ ಕುಮಾರ್‌ ಎಂ., ಶಂಕರ ಭಟ್ಟ ಬಾಳೆಪುಣಿ, ಗೋರಂಗ್‌ ತಯಾ ರಕ ಡಾ| ಶಶಿಶೇಖರ ದರ್ಭೆ ಅವ ರನ್ನು ಸಮ್ಮಾನಿಸಲಾಯಿತು. ವಿಶಿಷ್ಟ ಶ್ರೇಣಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡ ಲಾಯಿತು. ಸಾವಿರ ಸುರಭಿಯ ಮಾತೆ ಯರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here