Home ಧಾರ್ಮಿಕ ಸುದ್ದಿ ನಿಟಿಲಾಪುರ: ಧ್ವಜಸ್ತಂಭ, ಶಿಖರ ಪ್ರತಿಷ್ಠೆ, ಪುಷ್ಕರಣಿ ಸಮರ್ಪಣೆ

ನಿಟಿಲಾಪುರ: ಧ್ವಜಸ್ತಂಭ, ಶಿಖರ ಪ್ರತಿಷ್ಠೆ, ಪುಷ್ಕರಣಿ ಸಮರ್ಪಣೆ

1444
0
SHARE

ಬಂಟ್ವಾಳ : ಮೊಗರನಾಡು ಸಾವಿರ ಸೀಮೆಯ ಸೀಮೆ ದೇವರಾದ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಧ್ವಜಸ್ತಂಭ ಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಪುಷ್ಕರಣಿ ಸಮರ್ಪಣೆ ಧಾರ್ಮಿಕ ವೈದಿಕ ಕಾರ್ಯಕ್ರಮಗಳು ಸೋಮವಾರ ನಡೆದವು.

ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಧ್ವಜಸ್ತಂಭ ಪ್ರತಿಷ್ಠೆ ಮತ್ತು ಶಿಖರ ಪ್ರತಿಷ್ಠೆಯನ್ನು ವೈದಿಕ ವಿಧಿಪ್ರಕಾರ ನೆರವೇರಿಸಿದರು. ಪ್ರಧಾನ ಅರ್ಚಕ ನಾರಾಯಣ ರಾವ್‌ ಕಾರಂತ ಉಪಸ್ಥಿತಿ ಯಲ್ಲಿ ಕ್ಷೇತ್ರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆಶೋಕ ಕುಮಾರ್‌ ಬರಿಮಾರು ಶಿಖರ ಪ್ರತಿಷ್ಠೆ ನಡೆಸಿ ಪುಪ್ಪಾರ್ಚನೆ, ಹಾಲು, ನೀರು ಅಭಿಷೇಕ ನಡೆಸಿದರು.

ಇದೇ ಸಂದರ್ಭದಲ್ಲಿ ಕ್ಷೇತ್ರದ ನೂತನ ಪುಷ್ಕರಣಿಯನ್ನು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಮಾಣಿ ಉಪಸ್ಥಿತಿಯಲ್ಲಿ ದೀಪಾರಾಧನೆ ಮೂಲಕ ಲೋಕಾರ್ಪಣೆ ನಡೆಯಿತು.

ಕ್ಷೇತ್ರದಲ್ಲಿ ನಿರಂತರ ಅನ್ನ ಸಂತರ್ಪಣೆ, ಧಾರ್ಮಿಕ ಸಭೆ, ಸಾಂಸ್ಕೃತಿಕ ವೈವಿಧ್ಯಗಳು ಅಭೂತಪೂರ್ವ ರೀತಿಯಲ್ಲಿ ನಡೆದು ಬಂದಿವೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗೌರವ ಅಧ್ಯಕ್ಷತೆಯಲ್ಲಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸಂತೋಷ್‌ ಕುಮಾರ್‌ ಶೆಟ್ಟಿ ಅರೆಬೆಟ್ಟು ಮತ್ತು ವಿವಿಧ ಸಮಿತಿಗಳ ಪ್ರಮುಖರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ವ್ಯವಸ್ಥೆಗಳು ಸಾಂಗೋಪಾಂಗವಾಗಿ ನಡೆದಿದೆ.

ದಿನಂಪ್ರತಿ ಬರುತ್ತಿರುವ ಸಹಸ್ರಾರು ಮಂದಿ ಭಕ್ತರಿಗೆ ಅತ್ಯಂತ ಯಶಸ್ವಿಯಾಗಿ ಮಧ್ಯಾಹ್ನ, ರಾತ್ರಿಯ ಊಟೋಪಹಾರವನ್ನು ಆಹಾರ ಸಮಿತಿ ಯಾವುದೇ ಲೋಪ ಬಾರದಂತೆ ನಿರ್ವಹಿಸಿದೆ. ಸಮಿತಿ ಪ್ರಮುಖರೇ ಎಲ್ಲ ಕಡೆಗಳಲ್ಲಿ ವ್ಯವಸ್ಥೆಗಳ ಬಗ್ಗೆ ಲೋಪ ಆಗದಂತೆ ಗಮನಹರಿಸುತ್ತಿದ್ದುದು. ಪ್ರತಿದಿನ ರಾತ್ರಿ ವಿವಿಧ ಸಮಿತಿಗಳ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸುತ್ತಿರುವುದು ಕಾರ್ಯಕ್ರಮದ ಯಶಸ್ಸಿಗೆ ಕಾರಣ ಎಂಬುದಲ್ಲಿ ಎರಡು ಮಾತಿಲ್ಲ.

ಬ್ರಹ್ಮಕಲಶೋತ್ಸವ ನಡೆಯುವ ಮಾ. 29ರಂದು ಭಾರೀ ಪ್ರಮಾಣದ ಭಕ್ತರ ಆಗಮನದ ನಿರೀಕ್ಷೆಯನ್ನು ಇಟ್ಟುಕೊಂಡಿರುವ ಸಮಿತಿಯು ಅದರ ನಿರ್ವಹಣೆಗಾಗಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಅಭೂತಪೂರ್ವ ಬ್ರಹ್ಮಕಲಶೋತ್ಸವಕ್ಕೆ ವೇದಿಕೆ ಸಿದ್ಧವಾಗಿದ್ದು ಮಾ. 29ರಂದು ಬೆಳಗ್ಗೆ 11.30ರ ಶುಭ ಮುಹೂರ್ತದಲ್ಲಿ ದೇವರ ಬ್ರಹ್ಮಕಲಶೋತ್ಸವ ವಿಧಿಬದ್ಧವಾಗಿ ನಡೆಯಲಿದೆ.

LEAVE A REPLY

Please enter your comment!
Please enter your name here