Home ಧಾರ್ಮಿಕ ಸುದ್ದಿ ನಿಟಿಲಾಕ್ಷ ಸದಾಶಿವ ದೇವಸ್ಥಾನ: ದೀಪ ಬಲಿ ಉತ್ಸವ

ನಿಟಿಲಾಕ್ಷ ಸದಾಶಿವ ದೇವಸ್ಥಾನ: ದೀಪ ಬಲಿ ಉತ್ಸವ

977
0
SHARE

ಬಂಟ್ವಾಳ : ಶ್ರೀ ಕ್ಷೇತ್ರ ನಿಟಿಲಾಕ್ಷ ಸದಾಶಿವ ದೇವರ ವರ್ಷಾವಧಿ ಜಾತ್ರಾ ಮಹೋತ್ಸವ ಪ್ರಯುಕ್ತ ಎ.2ರಂದು ಬೆಳಗ್ಗೆ 8ರಿಂದ ದೀಪ ಬಲಿ ಉತ್ಸವ ನಡೆಯಿತು. ಮಧ್ಯಾಹ್ನ 12ರಿಂದ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದು, ಸಹಸ್ರಾರು ಮಂದಿ ಭಕ್ತರು ದೇವರ ಅನ್ನ ಪ್ರಸಾದ ಸ್ವೀಕರಿಸಿದರು. ರಾತ್ರಿ 7.30ರಿಂದ ನಡುಬಲಿ ಉತ್ಸವ, ದರ್ಶನ ಬಲಿ, ಚಂದ್ರಮಂಡಲ ಉತ್ಸವಗಳು ಎಂದಿನ ಕಟ್ಟುಕಟ್ಟಲೆ ಪ್ರಕಾರ ನಡೆದವು.

ಶ್ರೀ ದೇವರ ಭೇಟಿ, ಬಟ್ಟಲು ಕಾಣಿಕೆ, ಪಿಲಿಂಜ ಕಟ್ಟೆಗೆ ಸವಾರಿಯನ್ನು ಹಮ್ಮಿಕೊಂಡಿದ್ದು ನೂರಾರು ಮಂದಿ ಕಟ್ಟೆ ಸವಾರಿ ಸೇವೆಯಲ್ಲಿ ಪಾಲ್ಗೊಂಡರು. ಊರವರಿಂದ ಇದೇ ಸಂದರ್ಭದಲ್ಲಿ ದೇವರಿಗೆ ವಿಶೇಷ ಪೂಜೆ, ಹಣ್ಣು ಕಾಯಿ ಸಮರ್ಪಣೆ, ಪ್ರಸಾದ ಸ್ವೀಕಾರ ವಿಧಿಗಳು ನಡೆದವು. ದೇವರು ಕ್ಷೇತ್ರಕ್ಕೆ ಬಂದ ಬಳಿಕ ಉಯ್ನಾ ಲೋತ್ಸವ ನಡೆದು ದೇವರ ಬಿರುದಾವಳಿ ಯನ್ನು ಉದ್ಘೋಷಣಾ ಮಂತ್ರೋಚ್ಚಾರ ಮೂಲಕ ಸಮರ್ಪಣೆ ನಡೆಯಿತು.

ರಾತ್ರಿ ಉಳ್ಳಾಲ್ತಿ ದೈವ, ಅಜ್ಜೆàರ ದೈವಗಳಾದ ಅಣ್ಣ ತಮ್ಮ ದೈವಗಳು ಮತ್ತು ದುರ್ಗಾಲಯ ದೈವಗಳಿಗೆ ನೇಮವು ವಿಧಿಬದ್ಧವಾಗಿ ನೆರವೇರಿತು. ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಶೋಕ ಕುಮಾರ್‌ ಬರಿಮಾರು, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಮಾಣಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸಂತೋಷ್‌ ಕುಮಾರ್‌ ಶೆಟ್ಟಿ ಅರೆಬೆಟ್ಟು, ಪ್ರಧಾನ ಅರ್ಚಕ ನಾರಾಯಣ ರಾವ್‌ ಕಾರಂತ, ಪ್ರಮುಖರಾದ ಗಣೇಶ್‌ ಶೆಟ್ಟಿ ಗೊಳ್ತಮಜಲು ಹಾಗೂ ಗಣೇಶ್‌ ನಾಯ್ಕ ಚನಿಲ, ಕೆ. ಪದ್ಮನಾಭ ರೈ ಕಲ್ಲಡ್ಕ, ಬಾಲಪ್ಪ ಗೌಡ ನಿಟಿಲಾಪುರ, ಚೇತನಾ ಜನಾರ್ದನ, ಬಟ್ಯಪ್ಪ ಶೆಟ್ಟಿ ನಿಟಿಲಾಪುರ, ಡಾ| ವಸಂತ ಎನ್‌., ಹೇಮಲತಾ ಗಟ್ಟಿ, ಮತ್ತು ಬ್ರಹ್ಮಕಲಶೋತ್ಸವ ವಿವಿಧ ಸಮಿತಿ ಪ್ರಮುಖರು, ಸಂಚಾಲಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here