Home ಧಾರ್ಮಿಕ ಸುದ್ದಿ ನೃಸಿಂಹ ದೇವರ ಅವಭೃಥೋತ್ಸವ

ನೃಸಿಂಹ ದೇವರ ಅವಭೃಥೋತ್ಸವ

133
0
SHARE

ಸುಬ್ರಹ್ಮಣ್ಯ : ಶ್ರೀ ಸಂಪುಟ ನೃಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ರವಿವಾರ ಶ್ರೀ ಅವಭೃಥೋತ್ಸವ ಕುಮಾರಧಾರಾ ನದಿಯಲ್ಲಿ ಸಂಭ್ರಮದಿಂದ ನಡೆದು, ನೃಸಿಂಹ ಜಯಂತಿ ಉತ್ಸವ ಸಂಪನ್ನಗೊಂಡಿತು.

ಬೆಳಗ್ಗೆ ಮಠದಲ್ಲಿ ಮಂಗಳಾರತಿ, ಬಳಿಕ ಹೊರಾಂಗಣದಲ್ಲಿ ಶ್ರೀ ನೃಸಿಂಹ ದೇವರ ಪ್ರದಕ್ಷಿಣೆ ನಡೆಯಿತು. ಬಳಿಕ ಶ್ರೀ ದೇವರನ್ನು ರಥದಲ್ಲಿ ಕುಳ್ಳಿರಿಸಿ ಕುಮಾರಧಾರಾ ನದಿಯ ಜಳಕದ ಸ್ಥಳಕ್ಕೆ ಮೆರವಣಿಗೆ ತೆರಳಿತು. ಹೊಳೆಯಲ್ಲಿ ದೇವರ ಪುಣ್ಯಸ್ನಾನ ನಡೆಯಿತು. ಬಳಿಕ ಅಲ್ಲಿ ದೇವರಿಗೆ ಮಂಗಳಾರತಿ ನಡೆದು ವಸಂತಪೂಜೆ ನೆರವೇರಿತು.

ದೇವರ ಉತ್ಸವ ತೆರಳುವ ರಸ್ತೆಯುದ್ದಕ್ಕೂ ಭಕ್ತರು ದೇವರಿಗೆ ಆರತಿ, ಹಣ್ಣುಕಾಯಿ, ಹಣ್ಣು ಹಂಪಲು ಅರ್ಪಿಸಿದರು. ಶ್ರೀ ಮಠದ ಯತಿ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಗಳ ನೇತೃತ್ವದಲ್ಲಿ ನಡೆದ ಶ್ರೀ ದೇವರ ಅವಭೃಥೋತ್ಸವದಲ್ಲಿ ಮಠದ ದಿವಾನ ಸುದರ್ಶನ ಜೋಯಿಸ ಸಹಿತ ನೂರಾರು ಭಕ್ತರು, ಮಠದ ಸಿಬಂದಿ ಪಾಲ್ಗೊಂಡಿದ್ದರು. ಬಿಗು ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

LEAVE A REPLY

Please enter your comment!
Please enter your name here