Home ಧಾರ್ಮಿಕ ಸುದ್ದಿ ನಿಡ್ವಾಳ ದೇವಸ್ಥಾನ: ಪ್ರತಿಷ್ಠಾ ವಾರ್ಷಿಕೋತ್ಸವ

ನಿಡ್ವಾಳ ದೇವಸ್ಥಾನ: ಪ್ರತಿಷ್ಠಾ ವಾರ್ಷಿಕೋತ್ಸವ

685
0
SHARE

ಸುಬ್ರಹ್ಮಣ್ಯ : ಐವತ್ತೂಕ್ಲು ಗ್ರಾಮದ ಎಣ್ಮೂರು ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.

ಬೆಳಗ್ಗೆ ಮಹಾಗಣಪತಿ ಹೋಮ, ಪಂಚವಿಂಶತಿ ಕಲಶ ಪೂಜೆ, ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ, ನಾಗದೇವರಿಗೆ ಮತ್ತು ದೈವಗಳಿಗೆ ಕಲಶಾಭಿಷೇಕ ಮತ್ತು ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತ ರಣೆ, ಅನ್ನಸಂತರ್ಪಣೆ ನೆರವೇರಿತು. ಸಂಜೆ ದೈವಗಳ ಭಂಡಾರ ತೆಗೆಯಲಾಯಿತು. ರಾತ್ರಿ ಮಹಾಪೂಜೆ ಬಳಿಕ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ, ಅನ್ನ ಸಂತರ್ಪಣೆ ಹಾಗೂ ಶ್ರೀ ಚಾಮುಂಡಿ ಅಮ್ಮನವರ ಮತ್ತು ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮ ನಡೆಯಿತು. ದೇವರ ಬಲಿಯೊಂದಿಗೆ ಚಂಡೆ, ಬ್ಯಾಂಡ್‌, ವಾಲಗ, ಕೀಲುಕುದುರೆ, ಗೊಂಬೆಗಳು ಹಾಗೂ ಭಜನ ತಂಡ, ನೂರಾರು ಭಕ್ತರು ಪಾಲ್ಗೊಂಡಿದ್ದರು. ಆಕರ್ಷಕ ಸಿಡಿಮದ್ದು ಪ್ರದರ್ಶನ ಜರಗಿತು. ಉತ್ಸವದ ಪ್ರಯುಕ್ತ ದೇಗುಲವನ್ನು ವಿದ್ಯುದ್ದೀಪಗಳು ಮತ್ತು ಹೂವಿನಿಂದ ಶೃಂಗರಿಸಲಾಗಿತ್ತು. ಅಭಿವೃದ್ಧಿ ಸಮಿತಿ, ಆಡಳಿತ ಮಂಡಳಿ, ಅರ್ಚಕ ವೃಂದ, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here