ನಿಡ್ಪಳ್ಳಿ: ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನ ಹಾಗೂ ದೈವಸ್ಥಾನಗಳ ಜೀರ್ಣೋದ್ಧಾರ ಕೆಲಸ ಭರದಿಂದ ಸಾಗುತ್ತಿದ್ದು, ಜೀರ್ಣೋದ್ಧಾರ ಕೆಲಸಕ್ಕೆ ಮುಂಡೂರು ಸುಬ್ಬಣ್ಣ ರೈ 50 ಸಾವಿರ ರೂ.ಗಳನ್ನು ದೇಣಿಗೆಯಾಗಿ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಬೋರ್ಕರ್, ಕಾರ್ಯದರ್ಶಿ ನಾಗೇಶ ಗೌಡ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ತಿಮ್ಮಣ್ಣ ರೈ ಆನಾಜೆ, ದಾಮೋದರ ರೈ ಪಡ್ಡಂಬೈಲು, ರಾಧಾಕೃಷ್ಣ ರೈ ಪಟ್ಟೆ, ಗಂಗಾಧರ ರೈ ಆನಾಜೆ, ಬಾಲಚಂದ್ರ ರೈ ಆನಾಜೆ ರಘುರಾಮ ಆಳ್ವ ಗೋಳಿತ್ತಡಿ, ಶಿವಪ್ಪ ಪೂಜಾರಿ, ಭಾರತಿ ಶಿವಪ್ಪ ಪೂಜಾರಿ ಉಪಸ್ಥಿತರಿದ್ದರು.