ಬಡಗನ್ನೂರು : ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನ ಮತ್ತು ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶ್ರೀ ಶಾಂತಾದುರ್ಗಾ ದೇವಿಗೆ ಮಹಾ ಬ್ರಹ್ಮಕಲಶಾಭಿಷೇಕ ಮಾ. 16ರಂದು ಸಂಪನ್ನಗೊಂಡಿತು.
ಪ್ರಾತಃಕಾಲ 5ಕ್ಕೆ ಶ್ರೀ ಪೂಮಾಣಿ- ಕಿನ್ನಿಮಾಣಿ ದೈವಗಳ ಧ್ವಜಾರೋಹಣ ನಡೆಯಿತು. 5.30ರಿಂದ ದೇವಸ್ಥಾನದಲ್ಲಿ ಕವಾಟೋದ್ಘಾಟನೆ, ಕಣಿದರ್ಶನ, ತೈಲಾಭಿಷೇಕ, ಹೋಮ ಕಲಶಾಭಿಷೇಕ ಪೂಜೆ, ಪರಿಕಲಶಾಭಿಷೇಕ, ಮಹಾ ಬ್ರಹ್ಮ ಕಲಶಾಭಿಷೇಕ ನಡೆಯಿತು. 12.30ರಿಂದ ಮಹಾಪೂಜೆ, ನಡೆಯಿತು. ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ನೇತೃತ್ವದಲ್ಲಿ ವಿಧಿ ವಿಧಾನಗಳು ನಡೆದವು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ ರೈ ಕೋಡಿಂಬಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಬೋರ್ಕರ್, ಉಪಾಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು,
ಕಾರ್ಯದರ್ಶಿ ನಾಗೇಶ ಗೌಡ ಪುಳಿತ್ತಡಿ, ಶಂಕರನಾರಾಯಣ ಭಟ್, ಮುಂಡೂರು ಜೀರ್ಣೋದ್ಧಾರ ಸಮಿತಿ ಸಲಹೆಗಾರ ವಾಸುದೇವ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ನಿಡ³ಳ್ಳಿ ಗುತ್ತು ಚಾವಡಿಯ ಪ್ರವೀಣ್ ಕುಮಾರ್ ಆರಿಗ, ಕೋಶಾಧಿಕಾರಿ ತಾರಾನಾಥ ರೈ, ವಿವಿಧ ಸಮಿತಿಗಳ ಸಂಚಾಲಕರಾದ ರಘುರಾಮ ಆಳ್ವ ಗೋಳಿತ್ತಡಿ, ಶ್ರೀನಿವಾಸ್ ಭಟ್ ವಲ್ತಾಜೆ, ಶ್ರೀನಿವಾಸ್ ಗೌಡ ಹೊಗೆಗದ್ದೆ, ಸದಾನಂದ ಕಾನನಶ್ರೀ, ಸತ್ಯನಾರಾಯಣ ಮಣಿಯಾಣಿ ಬೊಳುಂಬುಡೆ, ಕುಮಾರ ನರಸಿಂಹ ಭಟ್, ದಯಾನಂದ ರೈ ಪಟ್ಟೆ, ರಾಜೇಶ್ ನೆಲ್ಲಿತ್ತಡ್ಕ, ದಯಾನಂದ ರೈ ಕೊರ್ಮಂಡ, ಕುಂಞಣ್ಣ ಗೌಡ, ಗಂಗಾಧರ ಗೌಡ ಚೆಲ್ಯರಮೂಲೆ, ರಾಮಚಂದ್ರ ಮಣಿಯಾಣಿ, ದಯಾನಂದ ಕುಲಾಲ್, ಸಂತೋಷ ಪೂಜಾರಿ ಕಾನ, ಹರೀಶ್ ಬೋರ್ಕರ್, ರಾಧಾಕೃಷ್ಣ ರೈ ಪಟ್ಟೆ, ಸರ್ವೋತ್ತಮ ಬೋರ್ಕರ್ ಮತ್ತಿತರರು ಉಪಸ್ಥಿತರಿದ್ದರು.