ಬಡಗನ್ನೂರು: ನಿಡ್ಪಳ್ಳಿ ಶ್ರೀ ಶಾಂತಾದುರ್ಗಾದೇವಿಯ ಬಿಂಬ ಪ್ರತಿಷ್ಠೆ ಹಾಗೂ ಶ್ರೀ ಕಿನ್ನಿಮಾಣಿ – ಪೂಮಾಣಿ ಪರಿವಾರ ದೈವಗಳ ಪ್ರತಿಷ್ಠೆ ಕಾರ್ಯಕ್ರಮ ಮಾ. 13ರಂದು ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ನಡೆಯಿತು.
ಬೆಳಗ್ಗೆ 5ಕ್ಕೆ ಗಣಪತಿ ಹೋಮ, ಜೀವಕಲಶದಲ್ಲಿ ಮತ್ತು ಬಿಂಬದಲ್ಲಿ ಪೂಜೆ, ಮುಹೂರ್ತ ಸಮಯದಲ್ಲಿ ಬಿಂಬ ಪ್ರತಿಷ್ಠೆ, ಜೀವಕಲಶಾಭಿಷೇಕ, ಜೀವವಾಹನ, ಪಾಯಸಪೂಜೆ, ನಿತ್ಯ ಪೂಜೆ, ಪ್ರತಿಷ್ಠಾ ಬಲಿ, 6.50ರಿಂದ 7.40ರೊಳಗಿನ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರ ಹಾಗೂ ದೈವಗಳ ಪ್ರತಿಷ್ಠೆ, ಉಳ್ಳಾಕುಲು ಪರಿವಾರ ಸಾನ್ನಿಧ್ಯ ಕಲಶಾಭಿಷೇಕ, ಪ್ರಸನ್ನ ಪರ್ವ, ನಿತ್ಯನೈಮಿತ್ಯಗಳ ನಿರ್ಣಯ, 12.30ರಿಂದ ದೇವಸ್ಥಾನದಲ್ಲಿ ಮಹಾ ಪೂಜೆ, ಪ್ರಸಾದ ವಿತರಣಾ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.
ಬೆಳಗ್ಗೆ 10ರಿಂದ ಕಳತ್ತೂರು ಶ್ರೀ ಮಹಾದೇವಿ ಭಜನಾ ಸಂಘ ಸದಸ್ಯರಿಂದ ದಾಸ ಸಂಕೀರ್ತನೆ, 1.30ರಿಂದ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, 9ರಿಂದ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ವಿಸ್ಮಯ ಲೋಕ ಕಾರ್ಯಕ್ರಮ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ ರೈ ಕೋಡಿಂಬಾಡಿ, ಜೀರ್ಣೋ ದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಬೋರ್ಕರ್, ಉಪಾಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು , ಕಾರ್ಯದರ್ಶಿ ನಾಗೇಶ ಗೌಡ ಪುಳಿತ್ತಡಿ, ಶಂಕರನಾರಾಯಣ ಭಟ್ ಮುಂಡೂರು, ಜೀರ್ಣೋದ್ಧಾರ ಸಮಿತಿ ಸಲಹೆಗಾರ ವಾಸುದೇವ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲೊÂಟ್ಟು, ನಿಡ³ಳ್ಳಿ ಗುತ್ತು ಪ್ರವೀಣ್ ಕುಮಾರ್ ಆರಿಗ, ಕೋಶಾಧಿಕಾರಿ ತಾರಾನಾಥ ರೈ, ರಘುರಾಮ ಆಳ್ವ ಗೋಳೀತ್ತಡಿ, ಶ್ರೀನಿವಾಸ್ ಭಟ್ ವಲ್ತಾಜೆ, ಶ್ರೀನಿವಾಸ್ ಗೌಡ ಹೊÂಗೆಗ¨ªೆ, ಸದಾನಂದ ಕಾನನಶ್ರೀ, ಸತ್ಯನಾರಾಯಣ ಮಣಿಯಾಣಿ ಬೊಳುಂಬುಡೆ, ಕುಮಾರ ನರಸಿಂಹ ಭಟ್, ದಯಾನಂದ ರೈ ಪಟ್ಟೆ, ರಾಜೇಶ್ ನೆಲ್ಲಿತ್ತಡ್ಕ, ದಯಾನಂದ ರೈ ಕೊರ್ಮಂಡ, ಕುಂಞಣ್ಣ ಗೌಡ, ಗಂಗಾಧರ ಗೌಡ ಚೆಲ್ಯರಮೂಲೆ, ರಾಮ ಚಂದ್ರ ಮಣಿಯಾಣಿ, ದಯಾನಂದ ಕುಲಾಲ…, ಸಂತೋಷ ಪೂಜಾರಿ ಕಾನ, ಹರೀಶ್ ಬೋರ್ಕರ್, ರಾಧಾಕೃಷ್ಣ ರೈ ಪಟ್ಟೆ, ಸರ್ವೋತ್ತಮ ಬೋರ್ಕರ್ ಮೊದಲಾದವರು ಉಪಸ್ಥಿತರಿದ್ದರು.
ಧಾರ್ಮಿಕ ಕಾರ್ಯ
ಸಂಜೆ 6.30ರಿಂದ ನಡೆಪೂಜೆ, ಅಂಕುರಪೂಜೆ, ಅಕ್ಷಯದೀಪ ಸ್ಥಾಪನೆ, ಕವಾಟಬಂಧನ, 7ರಿಂದ ಸೋಪಾನದಲ್ಲಿ ಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯಿತು.