ನಿಡ್ಪಳ್ಳಿ : ನಿಡ್ಪಳ್ಳಿ ಗುತ್ತಿನ ಜೀರ್ಣೋದ್ಧಾರಗೊಳಿಸಿದ ಗೃಹ ಪ್ರವೇಶ, ಶ್ರೀ ಪಿಲಿಭೂತ ಮತ್ತು ಮಲರಾಯ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಮತ್ತು ಎನ್. ಪ್ರವೀಣ ಆರಿಗ ಅವರಿಗೆ ಪಟ್ಟಾಭಿಷೇಕ ಕಾರ್ಯಕ್ರಮ ಬುಧವಾರ ಬೆಳಗ್ಗೆ ಬ್ರಹ್ಮಶ್ರೀ ವೇ|ಮೂ| ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
ಪಟ್ಟಾಭಿಷೇಕ ನಂತರ ನಿತ್ಯ ನೈಮಿತ್ತಿಕ ನಿರ್ಣಯಗಳು, ಪ್ರಸಾದ ವಿತರಣೆ ನಡೆದು ನೂತನ ಗೃಹದಲ್ಲಿ ಶ್ರೀ ಭೈರವ ಪದ್ಮಾವತೀ ಆರಾಧನೆ ಹಾಗೂ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಗುತ್ತು ಮನೆಯ ಪ್ರಮೋದ್ ಆರಿಗ, ಜಗದೀಶ ಅಧಿಕಾರಿ ಮೂಡಬಿದಿರೆ, ಪ್ರವೀಣಚಂದ್ರ ಆಳ್ವ, ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಎನ್. ಕೃಷ್ಣ ಶೆಟ್ಟಿ ನುಳಿಯಾಲು, ಸಂಪ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ನಿವೃತ್ತ ಡಿವೈಎಸ್ಪಿ ಜಗನ್ನಾಥ ಶೆಟ್ಟಿ ಪುದ್ದೊಟ್ಟು ನುಳಿಯಾಲು, ನ್ಯಾಯವಾದಿ ರಾಧಾಕೃಷ್ಣ ರೈ ಆನಾಜೆ, ಮುರಳೀಕೃಷ್ಣ ಹಸಂತಡ್ಕ ಹಾಗೂ ಆರಿಗರ ಕುಟುಂಬಸ್ಥರು, ಬಂಧು ಮಿತ್ರರು, ಗುತ್ತು ಬಾರಿಕೆಯವರು ಪಾಲ್ಗೊಂಡರು.
ಶಾಸಕಿ ಭೇಟಿ
ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಆಗಮಿಸಿ, ಪ್ರಸಾದ ಸ್ವೀಕರಿಸಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ ಇದ್ದರು.