Home ಧಾರ್ಮಿಕ ಸುದ್ದಿ ನಿಡ್ಪಳ್ಳಿ ಬ್ರಹ್ಮಕಲಶ: ಹಸುರು ಹೊರೆಕಾಣಿಕೆ ಸಮರ್ಪಣೆ

ನಿಡ್ಪಳ್ಳಿ ಬ್ರಹ್ಮಕಲಶ: ಹಸುರು ಹೊರೆಕಾಣಿಕೆ ಸಮರ್ಪಣೆ

1591
0
SHARE

ಬಡಗನ್ನೂರು : ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನ ಮತ್ತು ಶ್ರೀ ಕಿನ್ನಿಮಾಣಿ – ಪೂಮಾಣಿ ಪರಿವಾರ ದೈವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೆ ಅಂಗವಾಗಿ ಮಾ. 8ರಂದು ಹಸುರು ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆಗೆ ರೆಂಜ ಶ್ರೀ ಅಯ್ಯಪ್ಪ ಭಜನ ಮಂದಿರದಲ್ಲಿ ಚಾಲನೆ ನೀಡಲಾಯಿತು.

ನಿವೃತ್ತ ಸೇನಾಧಿಕಾರಿ ಪಿಲಿಪಂಜರ ಶುಭಾಕರ ರಾವ್‌ ತೆಂಗಿನಕಾಯಿ ಒಡೆಯುವ ಮೂಲಕ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಗ್ರಾಮದ ದೇವಸ್ಥಾನ ಹಾಗೂ ದೈವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಊರಿನ ಭಕ್ತರು ಭಾಗವಹಿಸುವ ಮೂಲಕ ಕ್ಷೇತ್ರವನ್ನು ಬೆಳಗಿಸಬೇಕಿದೆ. ಮಾ. 21ರ ತನಕ ನಡೆಯುವ ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಗ್ರಾಮಸ್ಥರು ಭಾಗಿಯಾಗುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.

ಪಾಣಾಜೆ ಶ್ರೀ ರಣಮಂಗಲ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ, ಪ್ರಗತಿಪರ ಕೃಷಿಕ ಶ್ಯಾಮಸುಂದರ ಭಟ್‌ ಕುವೆಂಜ, ಗುರು ಸ್ವಾಮಿ ಕೃಷ್ಣಪ್ಪ ಗೌಡ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಬೋರ್ಕರ್‌, ಉಪಾಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು, ಶಂಕರನಾರಾಯಣ ಭಟ್‌ ಮುಂಡೂರು, ಜೀರ್ಣೋದ್ಧಾರ ಸಮಿತಿ ಸಲಹೆಗಾರ ವಾಸುದೇವ ಭಟ್‌, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶಶಿಕುಮಾರ್‌
ರೈ ಬಾಲ್ಕೋಟ್ಟು, ನಿಡ್ಪಳ್ಳಿಗುತ್ತು ಚಾವಡಿಯ ಪ್ರವೀಣ್‌ ಕುಮಾರ್‌ ಆರಿಗ, ಕೋಶಾಧಿಕಾರಿ ತಾರಾನಾಥ ರೈ, ಹಸುರು ಹೊರೆಕಾಣಿಕೆ ಸಮಿತಿ ಸಂಚಾಲಕ ರಘುರಾಮ ಆಳ್ವ
ಗೋಳಿತ್ತಡಿ, ವೈದಿಕ ಸಮಿತಿ ಸಂಚಾಲಕ ಶ್ರೀನಿವಾಸ್‌ ಭಟ್‌ ವಲ್ತಾಜೆ, ಕಾರ್ಯಾಲಯ ಸಮಿತಿ ಸಂಚಾಲಕ ಶ್ರೀ ನಿವಾಸ್‌ ಗೌಡ ಹ್ಯೊಗೆಗದ್ದೆ, ಉಗ್ರಾಣ ಸಮಿತಿ ಸಂಚಾಲಕ ಸದಾನಂದ ಕಾನನಶ್ರೀ, ಅಲಂಕಾರ ಸಮಿತಿ ಸಂಚಾಲಕ ಸತ್ಯನಾರಾಯಣ ಮಣಿಯಾಣಿ ಬೊಳುಂಬುಡೆ, ಪಾಕಶಾಲೆ ಸಮಿತಿ ಸಂಚಾಲಕ ಕುಮಾರ ನರಸಿಂಹ ಭಟ್‌, ಸಾಂಸ್ಕೃತಿಕ ಸಮಿತಿ ಸಂಚಾಲಕ ದಯಾನಂದ ರೈ ಪಟ್ಟೆ, ಸಭಾ ಕಾರ್ಯಕ್ರಮ ಸಮಿತಿ ಸಂಚಾಲಕ ರಾಜೇಶ್‌ ನೆಲ್ಲಿತ್ತಡ್ಕ, ಸಹ ಸಂಚಾಲಕ ದಯಾನಂದ ರೈ ಕೊರ್ಮಂಡ, ಆಹಾರ ಸಮಿತಿ ಸಂಚಾಲಕ ಕುಂಞಣ್ಣ ಗೌಡ, ಪ್ರಚಾರ ಸಮಿತಿ ಸಂಚಾಲಕ ಗಂಗಾಧರ ಗೌಡ ಚೆಲ್ಯರಮೂಲೆ, ಧ್ವನಿವರ್ಧಕ ಸಮಿತಿ ಸಂಚಾಲಕ ರಾಮಚಂದ್ರ ಮಣಿಯಾಣಿ, ಸ್ವಯಂ ಸೇವಕ ಸಮಿತಿ ಸಂಚಾಲಕ ದಯಾನಂದ ಕುಲಾಲ…, ಕಲಶ ಸಮಿತಿ ಸಂಚಾಲಕ ಸಂತೋಷ ಪೂಜಾರಿ ಕಾನ, ಅರ್ಥಿಕ ಸಮಿತಿ ಸಂಚಾಲಕ ಹರೀಶ್‌ ಬೋರ್ಕರ್‌, ಬ್ರಹ್ಮಕಲಶ ಸಮಿತಿ ಸಂಚಾಲಕ ರಾದ ರಾಧಾಕೃಷ್ಣ ರೈ ಪಟ್ಟೆ, ಸರ್ವೋತ್ತಮ
ಬೋರ್ಕರ್‌, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಮೆರವಣಿಗೆ ವೈಭವ ಕರಗ ನೃತ್ಯ, ಗೊಂಬೆ ಕುಣಿತ ಬ್ಯಾಂಡ್‌ ವಾದ್ಯ ಘೋಷಗಳ ಮೂಲಕ ರೆಂಜ ಅಯ್ಯಪ್ಪ ಭಜನ ಮಂದಿರದಿಂದ ಹೊರಟ ಮೆರವಣಿಗೆ ವಿಜಯನಗರ, ಕೂಟೇಲು, ಕಕ್ಕುಪುಣಿ ಮಾರ್ಗವಾಗಿ ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನ ಆಗಮಿಸಿತು. ನೂರಾರು ಭಕ್ತರು ಭಾಗವಹಿಸಿದ್ದರು. ನಿರೀಕ್ಷೆಗೂ ಮೀರಿದ ಹೊರೆಕಾಣಿಕೆ ಶ್ರೀ ಕ್ಷೇತ್ರಕ್ಕೆ ಸಮರ್ಪಣೆ ನಡೆಯಿತು.

ಇಂದು ಶ್ರೀ ಕ್ಷೇತ್ರದಲ್ಲಿ…
ಮಾ. 9ರಂದು ಬೆಳಗ್ಗೆ 6ರಿಂದ ವೈದಿಕ ಹಾಗೂ ತಾಂತ್ರಿಕ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ 1.30ರಿಂದ ಯಕ್ಷಗಾನ ಬಯಲಾಟ, ಸಂಜೆ ಅಂತಾರಾಷ್ಟ್ರೀಯ ಕಲಾವಿದರಿಂದ ಭರತನಾಟ್ಯ, ರಾತ್ರಿ 9ರಿಂದ ಪೆನ್ಸಿಲ್‌ ಬಾಕ್ಸ್‌ ಕಲಾವಿದರಿಂದ ವಿಭಿನ್ನ ಕಾರ್ಯಕ್ರಮ, ಬಳಿಕ “ನಿಕ್‌R ಗೊತ್ತುಂಡಾ’ ತುಳುನಾಟಕ ನಡೆಯಲಿದೆ. ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಟ್ಠಲದಾಸ ಸ್ವಾಮಿಗಳು ಆಶೀರ್ವಚನ ನೀಡಲಿದ್ದು, ಬೆಳ್ತಂಗಡಿ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ್‌ ಅಜಿಲ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್‌ ಕುಮಾರ್‌ ಕಟೀಲು, ಬಿಲ್ಲವ ಸಂಘದ ತಾಲೂಕು ಅಧ್ಯಕ್ಷ ಜಯಂತ
ನಡುಬೈಲು, ಜಿಲ್ಲಾ ಹಾಲು ಉತ್ಪಾದಕರ ಮಹಾಮಂಡಲದ ಅಧ್ಯಕ್ಷ ರವಿರಾಜ್‌ ಹೆಗ್ಡೆ, ಯತೀಶ್‌ ಅರ್ವಾರ ಭಾಗವಹಿಸಲಿದ್ದಾರೆ

LEAVE A REPLY

Please enter your comment!
Please enter your name here