Home ಧಾರ್ಮಿಕ ಸುದ್ದಿ ಹೊಸಬೆಟ್ಟು: ರಾಘವೇಂದ್ರ ಮಠದ ರಾಜಗೋಪುರಕ್ಕೆ ಶಿಲಾನ್ಯಾಸ

ಹೊಸಬೆಟ್ಟು: ರಾಘವೇಂದ್ರ ಮಠದ ರಾಜಗೋಪುರಕ್ಕೆ ಶಿಲಾನ್ಯಾಸ

926
0
SHARE

ಹೊಸಬೆಟ್ಟು: ನೂತನವಾಗಿ ನಿರ್ಮಾಣಗೊಳ್ಳಲಿರುವ ಇಲ್ಲಿನ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ರಾಜಗೋಪುರ ಮಂಟಪಕ್ಕೆ ಉದ್ಯಮಿ ಸಂತೋಷ್‌ ಕುಮಾರ್‌ ಶೆಟ್ಟಿ ಅವರು ಗುರುವಾರ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಶ್ರೀ ಗುರುಗಳ ಭಕ್ತನಾಗಿ ಸಹಕರಿಸಿದ್ದು, ಭಕ್ತರು ಇಲ್ಲಿನ ರಾಜಗೋಪುರ ನಿರ್ಮಾಣ ಹಾಗೂ ಮೇ ತಿಂಗಳಲ್ಲಿ ನಡೆಯುವ ಬ್ರಹ್ಮಕಲಶಕ್ಕೆ ಕೈಜೋಡಿಸ ಬೇಕು ಎಂದರು. ಉದ್ಯಮಿ ನವೀನ್‌ಕುಮಾರ್‌ ಕುಳಾಯಿ ಶುಭ ಹಾರೈಸಿದರು. ವೇ| ಮೂ| ಕಗ್ಗಿ ಗೋಪಾಲಕೃಷ್ಣ ಆಚಾರ್ಯ ಅವರು ಶಿಲಾನ್ಯಾಸದ ವಿಧಿ ವಿಧಾನವನ್ನು ನೆರವೇರಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಪುಂಡಲೀಕ ಹೊಸಬೆಟ್ಟು ಸರ್ವರ ಸಹಕಾರ ಕೋರಿದರು.ಅಧ್ಯಕ್ಷ ವಿಶ್ವೇಶ್ವರ ಬದವಿದೆ ಅಧ್ಯಕ್ಷತೆ ವಹಿಸಿದ್ದರು. ಕುಸುಮಾ ವಾದೀಶಚಾರ್ಯ, ಹೊಸಬೆಟ್ಟು ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಹರಿಕೃಷ್ಣ ಸಾಲ್ಯಾನ್‌, ಎಚ್. ಹರಿಶ್ಚಂದ್ರ ಹೊಸಬೆಟ್ಟು, ಬಂಟ್ವಾಳ ಮೋನಪ್ಪ ಗೌಡ ಕಾರ್ಯದರ್ಶಿ, ಎ.ವಿ.ಎಸ್‌. ಶಗ್ರಿತ್ತಾಯ, ಪವನ ಮೈರ್ಪಾಡಿ, ಆನಂದ ಪಿ.ಎಚ್., ಸುಕುಮಾರ್‌ ಸುರತ್ಕಲ್‌, ಕೆ. ಕೃಷ್ಣ ಭಟ್, ನಾಗರಾಜ ರಾವ್‌ ಹೊನ್ನಕಟ್ಟೆ, ಬಾಬು ಗೌಡ ಬಲ್ನಾಡ್‌, ರಜನಿ ದುಗ್ಗಣ್ಣ, ಸತ್ಯಜಿತ್‌ ಸುರತ್ಕಲ್‌, ವೆಂಕಟ್ರಾವ್‌, ಆನಂದ ಭಂಡಾರಿ, ರಾಜು ಹೊಸಬೆಟ್ಟು, ಮಠದ ಮೊಕ್ತೇಸರ ರಾಘವೇಂದ್ರ ಎಚ್.ವಿ. ಸ್ವಾಗತಿಸಿದರು. ಮಹೇಶ್‌ ಮೂರ್ತಿ ವಂದಿಸಿದರು. ಶ್ರೀನಿವಾಸ ಕುಳಾಯಿ ನಿರೂಪಿಸಿದರು.

LEAVE A REPLY

Please enter your comment!
Please enter your name here