ಪುಂಜಾಲಕಟ್ಟೆ : ಅರಳ ಗ್ರಾಮದ ಕುಟ್ಟಿಕಳ ಶ್ರೀ ಭದ್ರಕಾಳಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ನೂತನ ಶಿಲಾಮಯ ಭದ್ರಕಾಳಿ ದೇವಸ್ಥಾನ ಮತ್ತು ರಕ್ಷಾ ಕಲ್ಲುರ್ಟಿ ದೈವಸ್ಥಾನ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ಫೆ. 7ರಂದು ಜರಗಿತು.
ಕ್ಷೇತ್ರದ ತಂತ್ರಿ ಎಂ.ಕೆ. ಲೋಕೇಶ್ ಶಾಂತಿ ಮಂಗಳೂರು ಅವರ ನೇತೃತ್ವದಲ್ಲಿ ಶಿಲಾನ್ಯಾಸದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸ ಲಾಯಿತು. ಶ್ರೀಕ್ಷೇತ್ರ ಪೊಳಲಿಯ ಆನುವಂಶಿಕ ಮೊಕ್ತೇಸರ, ಅರ್ಚಕ ಅಡಿಗರು ಪೊಳಲಿ ಮಾಧವ ಭಟ್, ಶ್ರೀಕ್ಷೇತ್ರ ಪೊಳಲಿಯ ಅರ್ಚಕ ಪರಮೇಶ್ವರ ಭಟ್, ವಾಸ್ತುತಜ್ಞ ಮಹೇಶ್ ಮುನಿಯಂಗಳ, ಕ್ಷೇತ್ರದ ಧರ್ಮದರ್ಶಿ ಜನಾರ್ದನ ಶಾಂತಿ, ಪನೋಲಿಬೈಲು ಕ್ಷೇತ್ರದ ಹಿರಿಯ ಅರ್ಚಕ ಬಾಬು ಮೂಲ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ. ಮಹಾಬಲ ಸಪಲ್ಯ ಬಂಟ್ವಾಳ ಮತ್ತಿತರರಿದ್ದರು.