ಶಿರ್ವ : ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸಮಾಜದ ಗುರುವರ್ಯ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮೀ ಗುರುಗಳ ಆಶೀರ್ವಾದದೊಂದಿಗೆ ಕೂರ್ಮ ಸ್ಥಾಪನಾ ಕಾರ್ಯಕ್ರಮವು ನವರತ್ನ ಸ್ವರ್ಣಾಧಿ ನಿಕ್ಷೇಪಗಳೊಂದಿಗೆ ವೇ|ಮೂ| ಪುತ್ತೂರು ಬಾಲಕೃಷ್ಣ ಭಟ್ ಅವರ ನೇತೃತ್ವದಲ್ಲಿ, ವಾಸ್ತುಶಾಸ್ತ್ರಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಅವರ ಉಪಸ್ಥಿತಿಯಲ್ಲಿ ಕ್ಷೇತ್ರದ ಹಾಗೂ ಸಮಾಜದ ವೈದಿಕರ ಮಾರ್ಗದರ್ಶನದಲ್ಲಿ ಬುಧವಾರ ನೆರವೇರಿತು.
ಕ್ಷೇತ್ರದ ಹಿರಿಯ ಅರ್ಚಕ ವೇ|ಮೂ| ರಘುರಾಮ ಭಟ್, ಗೋವಾಶ್ರೀ ಮಠದ ವೈದಿಕರಾದ ಸುಬ್ರಹ್ಮಣ್ಯ ಭಟ್, ಶ್ರೀಕಾಂತ್ ಭಟ್, ಶ್ರೀಕ್ಷೇತ್ರದ ಮತ್ತು ಸಮಾಜದ ವೈದಿಕರ ಸಹಕಾರದೊಂದಿಗೆ ಬೆಳಗ್ಗೆ 10.40ಕ್ಕೆ ನೂತನ ಗರ್ಭಗುಡಿ, ಪರಿವಾರ ದೇವರಾದ ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ ಹಾಗೂ ಸುತ್ತುಪೌಳಿ ನಿರ್ಮಾಣ ಕಾರ್ಯದ ಧಾರ್ಮಿಕ ಕಾರ್ಯಕ್ರಮ ಜರಗಿತು.
ದೇವಸ್ಥಾನದ ಅಡಳಿತ ಮಂಡಳಿ ಅಧ್ಯಕ್ಷ ಗಂಪದಬೈಲು ಜಯರಾಮ ಪ್ರಭು ದಂಪತಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಮಂಚಿ ಮಂಜುನಾಥ್ ನಾಯಕ್, ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ ಧಾರ್ಮಿಕ ಅನುಷ್ಠಾನದಲ್ಲಿ ಪಾಲ್ಗೊಂಡಿದ್ದರು.
ದೇವಸ್ಥಾನದ ಅಡಳಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶಶಿಧರ ವಾಗ್ಲೆ ಸಡಂಬೈಲು, ಮಣಿಪಾಲ ನರಸಿಂಗೆ ದೇವಸ್ಥಾನದ ಆಡಳಿತ ಮೊಕ್ತೇಸರ ಅಲೆವೂರು ರಮೇಶ್ ಸಾಲ್ವಣ್ಕಾರ್, ಅಧ್ಯಕ್ಷ ಆನಂದ ನಾಯಕ್, ಕಾರ್ಕಳ ಹಿರ್ಗಾನದ ಶ್ರೀ ಕ್ಷೇತ್ರ ಲಕ್ಷ್ಮೀಪುರದ ಆಡಳಿತ ಮೊಕ್ತೇಸರ ಸದಾನಂದ ಪ್ರಭು, ಮಾಜಿ ಆಡಳಿತ ಮೊಕ್ತೇಸರರಾದ ಸರಳೇಬೆಟ್ಟು ರಮಾನಾಥ ನಾಯಕ್, ಬನ್ನಂಜೆ ಬಾಲಕೃಷ್ಣ ನಾಯಕ್, ಬೆಲ್ಪತ್ರೆ ವಿಶ್ವನಾಥ್ ನಾಯಕ್, ಮಾಜಿ ಅಧ್ಯಕ್ಷರಾದ ಪಿ. ದಯಾನಂದ ಕಾಮತ್ ಮೂಡುಬೆಳ್ಳೆ, ಹಿರಿಯ ವೈದಿಕ ವೇ| ಮೂ| ಕೆ. ವೇದವ್ಯಾಸರಾಯ ಭಟ್, ಕರ್ಣಾಟಕ ಬ್ಯಾಂಕ್ನ ನಿವೃತ್ತ ಡಿಜಿಎಂ ಉಪೇಂದ್ರ ಪ್ರಭು, ಹಿರಿಯರಾದ ನಾರಾಯಣ ಪ್ರಭು ಕೋಡುಗುಡ್ಡೆ, ದೇವಯ್ಯ ಪ್ರಭು ಮುರತಂಗಡಿ, ಪಟ್ಲ ವಿಶ್ವನಾಥ್ ನಾಯಕ್, ಕರ್ನಾಟಕ ಸರಕಾರ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಎಳ್ಳಾರೆ ಸದಾಶಿವ ಪ್ರಭು ಬೆಂಗಳೂರು, ಆರ್ಎಸ್ಬಿ ಸಂಘದ ಅಧ್ಯಕ್ಷ ಪೆರ್ಣಂಕಿಲ ಶ್ರೀಶ ಶಂಕರ ನಾಯಕ್, ಪ್ರಧಾನ ಕಾರ್ಯದರ್ಶಿ ಎಸ್.ಪಿ. ಕಾಮತ್ ಎಳ್ಳಾರೆ, ಜಿ.ಪಂ. ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಪತ್ರಕರ್ತ ಸರಳೇಬೆಟ್ಟು ಗೋಪಾಲಕೃಷ್ಣ ನಾಯಕ್, ಶ್ರೀ ದುರ್ಗಾಪರಮೇಶ್ವರೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ರಾಮಕೃಷ್ಣ ನಾಯಕ್, ರಾಜಾಪುರ ಸಾರಸ್ವತ ಯುವ ವೃಂದದ ಗೌರವ ಅಧ್ಯಕ್ಷ ಕೆ.ಆರ್. ಪಾಟ್ಕರ್,ಅಧ್ಯಕ್ಷ ಆಶಿಷ್ ಪಾಟ್ಕರ್, ಶಿಲ್ಪಿ ಕುಪ್ಪುಸ್ವಾಮಿ ಕಾರ್ಕಳ, ಕಾಷ್ಠಶಿಲ್ಪಿ ನಾರಾಯಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.