ಕಾಪು, ಜೂ. 9 : ಕೋವಿಡ್ 19 ಹರಡುವಿಕೆಯ ಮುಂಜಾಗ್ರತಾ ಕ್ರಮವಾಗಿ ಕಳೆದ ಎರಡೂವರೆ ತಿಂಗಳಿನಿಂದ ಜಾರಿಯಲ್ಲಿದ್ದ ಲಾಕ್ ಡೌನ್ ತೆರವಾದ ಹಿನ್ನಲೆಯಲ್ಲಿ ಕಾಪು ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಯಲ್ಲಿ ಮಂಗಳವಾರ ಭಕ್ತರ ಭೇಟಿಗೆ ಅವಕಾಶ ನೀಡಲಾಗಿದೆ.
ಸಾಮಾಜಿಕ ಅಂತರ, ಸರತಿ ಸಾಲಿನ ವ್ಯವಸ್ಥೆ, ಮಾಸ್ಕ್ ಕಡ್ಡಾಯ , ಒಳಪ್ರವೇಸಿ ಶುವಾಗ ದೇಹದ ಉಷ್ಣಾಂಶ ಪರೀಕ್ಷಿಸಿ, ಹ್ಯಾಂಡ್ ಸ್ಯಾನಿಟೈಸರ್ ನೀಡಿ ಒಳ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.
ಕಾಪು ಹಳೇ ಮಾರಿಗುಡಿಯಲ್ಲಿ
ಮಾತ್ರಾ ಮುಂದಿನ ಜೂ.15ರವರೆಗೆ ದೇಗುಲ ಪ್ರವೇಶವನ್ನು ಮುಂದೂಡಲಾಗಿದೆ ಎಂದು ಹಳೇ ಮಾರಿಗುಡಿಯ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಸಾದ್ ಶೆಣೈ ತಿಳಿಸಿದ್ದಾರೆ.