ಸುಳ್ಯಪದವು : ಗಡಿಭಾಗದಲ್ಲಿರುವ ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾದ ವಾರ್ಷಿಕ ಜಾತ್ರೆಯಲ್ಲಿ ಗುರುವಾರ ರಾತ್ರಿ ನಡುದೀಪೋತ್ಸವ, ದೇವರ ಉತ್ಸವ ನಡೆಯಿತು.
ಬೆಳಗ್ಗೆ ದೇವರ ಉತ್ಸವ, ತುಲಾಭಾರ ಸೇವೆ, ಮಹಾಪೂಜೆ ನಡೆಯಿತು. ರಾಮಪ್ರಸಾದ್ ಬೇರಿಕೆ ಶ್ರೀ ದೇವರಿಗೆ ಬೆಳ್ಳಿಯ ಶಿವಮುಖ ಸಮರ್ಪಿಸಿದರು. ಫೆ. 19ರಂದು ಸುಮಿತ್ರಾ ಮಾಧವ ನೆಟ್ಟಣಿಗೆ ಶ್ರೀ ದೇವರಿಗೆ ಬೆಳ್ಳಿಯ ಗರುಡ ಸಮರ್ಪಣೆ ಮಾಡಿದರು.
ಗುರುವಾರ ರಾತ್ರಿ ಬೆಳ್ಳೂರು ಲಕ್ಷ್ಮಿಪಾರ್ವತಿ ಭಜನ ಸಂಘದಿಂದ ಭಜನ ಸಂಕೀರ್ತನೆ ನಡೆಯಿತು. ಆಡಳಿತ ಮಂಡಳಿಯ ಮೊಕ್ತೇಸರ ಎನ್. ದಾಮೋದರ ಮಣಿಯಾಣಿ, ಸದಸ್ಯರಾದ ಶ್ರೀಧರ ಕೇಕುಣ್ಣಾಯ ಹೊಸಮನೆ ಕಕ್ಕೆಬೆಟ್ಟು, ವಕೀಲ ಪದ್ಮನಾಭ ಕುಳದಪಾರೆ, ಚಂದ್ರಶೇಖರ್ ಬಜ,ವಿಶ್ವನಾಥ ಮಂಜತ್ತೂರು, ಭಕ್ತರು ಪಾಲ್ಗೊಂಡರು.
ಇಂದು ನೆಟ್ಟಣಿಗೆ ಬೆಡಿ ಶನಿವಾರ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ, ಶಯನೋದ್ಘಾಟನೆ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಶ್ರೀದೇವರ ಉತ್ಸವ, ಬೆಡಿಸೇವೆ,
ಮಹಾದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಂಗಳಾರತಿ, ನವಕಾಭಿಷೇಕ, ಮಂತ್ರಾಕ್ಷತೆ ನಡೆಯಲಿ¨