ಸುಳ್ಯಪದವು : ಕರ್ನಾಟಕ – ಕೇರಳ ಗಡಿಭಾಗದಲ್ಲಿರುವ ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 1ರಿಂದ ಮೇ 3ರ ವರೆಗೆ ಶ್ರೀ ಭೂತಬಲಿ ಮಹೋತ್ಸವ ನಡೆಯಿತು.
ಮಂಗಳವಾರ ಉಗ್ರಾಣ ತುಂಬಿ ಸುವುದು, ಬುಧವಾರದಂದು ಬೆಳಗ್ಗೆ ನವಕಾಭಿಷೇಕ, ಏಕಾದಶರುದ್ರಾ ಪೂಜೆ, ತುಲಾಭಾರ ಸೇವೆ, ಮಧ್ಯಾಹ್ನ ಮಹಾ ಪೂಜೆ, ಅನ್ನ ಸಂತರ್ಪಣೆ, ರಾತ್ರಿ ಶ್ರೀದೇವರ ಶೃಂಗಾರ ಬಲಿ ಉತ್ಸವ ನಡೆಯಿತು. ಗುರುವಾರದಂದು ಶ್ರೀ ದೇವರ ಬಲಿ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ನಡೆಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ನಾಕೂರು ದಾಮೋದರ ಮಣಿಯಾಣಿ, ಆಡಳಿತ ಮಂಡಳಿಯ ಸದಸ್ಯರು, ಭಕ್ತರು ಪಾಲ್ಗೊಂಡರು.