Home ಧಾರ್ಮಿಕ ಸುದ್ದಿ ನೆಲ್ಯಾಡಿ ಪಡುಬೆಟ್ಟು ಬ್ರಹ್ಮಕಲಶ: ಹೊರೆಕಾಣಿಕೆ ಸಮರ್ಪಣೆ

ನೆಲ್ಯಾಡಿ ಪಡುಬೆಟ್ಟು ಬ್ರಹ್ಮಕಲಶ: ಹೊರೆಕಾಣಿಕೆ ಸಮರ್ಪಣೆ

1300
0
SHARE

ನೆಲ್ಯಾಡಿ : ನೆಲ್ಯಾಡಿ ಗ್ರಾಮದ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ. 8ರ ಬೆಳಗ್ಗೆ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.

ಮಾ. 13ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಮಾ. 8ರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತದೊಂದಿಗೆ ಕಾರ್ಯ ಕ್ರಮಗಳಿಗೆ ಚಾಲನೆ ನೀಡಲಾಯಿತು. ಬ್ರಹ್ಮಕಲಶೋತ್ಸವದ ಅನ್ನಛತ್ರವನ್ನು ದೇವಸ್ಥಾನದ ಪ್ರಧಾನ ಅರ್ಚಕ ಬಿ.ಕೆ. ಶ್ರೀನಿವಾಸ ರಾವ್‌ ಉದ್ಘಾಟಿಸಿದರು. ಕಾರ್ಯಾಲಯವನ್ನು ಕಾವು-ಕೌಕ್ರಾಡಿ ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಉದ್ಘಾಟಿಸಿದರು.

ಹೊರೆಕಾಣಿಕೆ ಸಮರ್ಪಣೆ
ಪಡುಬೆಟ್ಟು, ಕೊಲೊÂಟ್ಟು, ಪೊಸೊಳಿಗೆ, ಪಟ್ಟೆ, ಸರೋಳಿಕೆರೆ, ತೊಟ್ಲ ಗುಂಡಿ, ಪಲಸತಡ್ಕ, ಪಟ್ಟೆಜಾಲು, ಬಾಕಿಜಾಲು,ಹೊಸವಕ್ಲು, ಅಡೀಲು, ದರ್ಖಾಸು ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಹೊರೆಕಾಣಿಕೆ ಹೊತ್ತ ವಾಹನಗಳ ಮೆರವಣಿಗೆ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಚಾಲನೆ ನೀಡಲಾಯಿತು. ಇಲ್ಲಿ ದೇವಸ್ಥಾನದ ಅರ್ಚಕ ಸುರೇಶ್‌ ಮುಂಚ್ಚಿತ್ತಾಯ ಅವರು ಪೂಜೆ ಸಲ್ಲಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧೀರ್‌ ಕುಮಾರ್‌, ಸದಸ್ಯ ನಾರಾಯಣ ಹೆಗ್ಡೆ ಪಡ³ಗುಡ್ಡೆ ಉಪಸ್ಥಿತರಿದ್ದರು. ಬಳಿಕ ಹೊರೆಕಾಣಿಕೆ ಮೆರವಣಿಗೆಯೂ ನೆಲ್ಯಾಡಿ ಪೇಟೆ ಮೂಲಕ ತೆರಳಿತು. ಪಡುಬೆಟ್ಟು ದೇವಸ್ಥಾನದ ದ್ವಾರದ ಬಳಿ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರು ಹೊರೆಕಾಣಿಕೆ ಮೆರವಣಿಗೆ ಉದ್ಘಾಟಿಸಿದರು. ಹೊರೆಕಾಣಿಕೆ ಸಮಿತಿ ಸಂಚಾಲಕ ಜಯಾನಂದ ಬಂಟ್ರಿಯಾಲ್‌ ಅವರ ನೇತೃತ್ವದಲ್ಲಿ ಭಜನೆಯೊಂದಿಗೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಆಡಳಿತ ಮೊಕ್ತೇಸರ ಡಾ| ಕೆ. ಸುಬ್ರಹ್ಮಣ್ಯ ಶಬರಾಯ, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಶ್ರೀಧರ ಗೋರೆ, ಅಧ್ಯಕ್ಷ ಜಯಪ್ರಕಾಶ್‌ ನೆಕ್ರಾಜೆ, ಕಾರ್ಯದರ್ಶಿ ರಾಜೇಶ್‌ ಪಡು ಬೆಟ್ಟು, ಪ್ರಧಾನ ಅರ್ಚಕ ಕೆ. ಶ್ರೀನಿವಾಸ ರಾವ್‌, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಗೌರಿಜಾಲು, ಕಾರ್ಯಾಧ್ಯಕ್ಷ ಸತೀಶ್‌ ಕೆ.ಎಸ್‌. ದುರ್ಗಾಶ್ರೀ, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್‌ ಬೀದಿಮಜಲು, ಕಾಂತಪ್ಪ ಗೌಡ ಪೂವಾಜೆ, ಕೋಶಾಧಿಕಾರಿಗಳಾದ ಆರ್‌.ವೆಂಕಟ್ರ ಮಣ, ಹರಿಶ್ಚಂದ್ರ ರೈ ಕಂಗಿನಡಿ, ಸಂಚಾಲಕ ಜಯಪ್ರಕಾಶ್‌ ನೆಕ್ರಾಜೆ, ಉಪಾಧ್ಯಕ್ಷರಾದ ಗಿರೀಶ್‌ ಶೆಟ್ಟಿ ಬೀದಿಮನೆ, ಜನಾರ್ದನ ಗೌಡ ಪಿಲವೂರು, ಸಂದೇಶ್‌ ಶೆಟ್ಟಿ ಆಮುಂಜ, ಜಗನ್ನಾಥ ರೈ ಪಟ್ಟೆ, ಬಿ. ರಮೇಶ್‌ ಶೆಟ್ಟಿ ಬೀದಿಮನೆ, ಸುಂದರ ಗೌಡ ಅತ್ರಿಜಾಲು, ಸ್ವಾಗತ ಸಮಿತಿ ಸಂಚಾಲಕ ಗಂಗಾಧರ ಶೆಟ್ಟಿ ಹೊಸಮನೆ, ಅಭಿವೃದ್ಧಿ ಸಮಿತಿ ಸಹ ಸಂಚಾಲಕ ಮೋಹನ ರೈ ಆಮುಂಜ, ಕೋಶಾಧಿಕಾರಿ ಶ್ರೀಪತಿ ಶಬರಾಯ, ರಾಜೀವ್‌ ರೈ ಆಮುಂಜ, ಸದಸ್ಯರಾದ ರವಿಚಂದ್ರ ಹೊಸವೊಕ್ಲು, ಸುರೇಶ್‌ ಪಡಿಪಂಡ, ನಮಿತಾ ಶೆಟ್ಟಿ ಪರಾರಿ, ಜಯಂತಿ ಬೀದಿಮನೆ, ಶಿವಪ್ರಕಾಶ್‌ ಬೀದಿಮಜಲು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ ರೈ ಉಪಸ್ಥಿತರಿದ್ದರು.

ಮಧ್ಯಾಹ್ನ ಕ್ಷೇತ್ರದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಭಾ ಸಂಯೋಜನೆ ಸಮಿತಿ ಸಂಚಾಲಕ, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ., ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ
ರಾತ್ರಿ ಸ್ಥಳೀಯ ಶಾಲಾ ಮಕ್ಕಳಿಂದ ಮತ್ತು ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.

ಭಜನ ಕಾರ್ಯಕ್ರಮ
ಅಪರಾಹ್ನ ಭಜನೋತ್ಸವವನ್ನು ನೆಲ್ಯಾಡಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಆನಂದ ಅಜಿಲ ಉದ್ಘಾಟಿಸಿದರು. ಬಳಿಕ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ಭಜನ ಮಂಡಳಿ, ಮಾದೇರಿ ಶ್ರೀ ಅಯ್ಯಪ್ಪ ಸ್ವಾಮಿ ಭಜನ ಮಂಡಳಿ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಭಜನ ಮಂಡಳಿ ಸದಸ್ಯರಿಂದ ಭಜನ ಕಾರ್ಯಕ್ರಮ ನಡೆಯಿತು. ಸಂಜೆ ಕ್ಷೇತ್ರದ ತಂತ್ರಿಗಳಿಗೆ ಹಾಗೂ ಇತರ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ರಾತ್ರಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹಾವಾಚನ, ಆಚಾರ್ಯಾದಿ ಋತ್ವಿಗÌರಣ, ಪ್ರಾಸಾದ ಶುದ್ಧಿ, ಅಂಕುರಾರೋಪಣ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾಬಲಿ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here