Home ನಂಬಿಕೆ ಸುತ್ತಮುತ್ತ ನೀತಿಶತಕ ಹೇಳಿದ ನೀತಿ ಪಾಠ

ನೀತಿಶತಕ ಹೇಳಿದ ನೀತಿ ಪಾಠ

1069
0
SHARE

ಜಗತ್ತು ಎಂದ ಮೇಲೆ ಅಲ್ಲಿ ಸಾವಿರಾರು ಬಗೆಯ ಬದುಕುಗಳಿವೆ. ಒಬ್ಬೊಬ್ಬರ ಬದುಕು ಕೂಡ ಪರಾವಲಂಬಿಯೇ ಆಗಿರುವುದರಿಂದ ಲೋಕದಲ್ಲಿ ನ್ಯಾಯ-ನೀತಿಗಳು ಹುಟ್ಟಿಕೊಂಡವು. ಎಲ್ಲರೂ ಸಮಾನರಾಗಿ ಬದುಕ ಬೇಕೆಂಬುದು ಸರ್ವಸಮ್ಮತವಾದ ನಿಲುವಾದರೂ ಹಲವು ಕಾರಣಗಳಿಂದ ಅದು ಅಸಾಧ್ಯವೆನಿಸಿದೆ. ಅದರೆ ಹಿತವಾದ ಬದುಕಿಗೆ ಎಲ್ಲರೊಡನೆಯೂ ಸುಮಧುರವಾದ ಸಂಬಂಧ ಇರಲೇಬೇಕಾಗಿರುವುದು ಅನಿವಾರ್ಯ. ಅನ್ಯಾಯ ಮತ್ತು ಅನೀತಿ ಇದಕ್ಕೆ ಅಡೆಯನ್ನುಂಟು ಮಾಡುತ್ತವೆ. ನೀತಿಯುತಾದದ್ದು ನ್ಯಾಯಕ್ಕೂ ನ್ಯಾಯಯುತವಾದದ್ದು ನೀತಿಗೂ ಪರಸ್ಪರ ಪೂರಕ. ಎಲ್ಲಕ್ಕೂ ಇಂದ್ರಿಯಗಳನ್ನು ಆಳುವ ಮನಸ್ಸು ಮೂಲ ಕಾರಣ. ಶುದ್ಧವಾದ ಮನಸ್ಸು ಉತ್ತಮ ಬಾಂಧವ್ಯವನ್ನೂ ಆ ಮೂಲಕ ಸಮಾಜವನ್ನೂ ದೇಶವನ್ನೂ ಇಡಿಯ ಜಗತ್ತನ್ನೂ ಕಟ್ಟಬಲ್ಲದು. ಆದರೆ ಈ ಮನಸ್ಸು ಸ್ಥಿರವಾಗಿರಬೇಕು. ನಮ್ಮ ಮನಸ್ಸು ಎಲ್ಲೆಲ್ಲಿ ಸೈರಣೆಯಿಂದ ಇರಬೇಕು ಎಂಬುದನ್ನು ನೀತಿಶತಕ ಹೇಳುತ್ತದೆ.

ಲೋಭಶ್ಚೇದಗುಣೇನ ಕಿಂ ಪಿಶುನತಾ ಯದ್ಯಸ್ತಿ ಕಿಂ ಪಾತಕೈಃ
ಸತ್ಯಂ ಚೇತ್ತಪಸಾ ಚ ಕಿಂ ಶುಚಿ ಮನೋ ಯದ್ಯಸ್ತಿ ತೀರ್ಥೇನ ಕಿಂ |
ಸೌಜನ್ಯಂ ಯದಿ ಕಿಂ ನಿಜೈಃ ಸುಮಹಿಮಾ ಯದ್ಯಸ್ತಿ ಕಿಂ ಮಂಡನೈಃ
ಸದ್ವಿದ್ಯಾ ಯದಿ ಕಿಂ ಧನೈರಪಯಶೋ ಯದ್ಯಸ್ತಿ ಕಿಂ ಮೃತ್ಯುನಾ ||

ದುರಾಸೆ ಎಂಬುದು ಬಲುದೊಡ್ಡ ದುರ್ಗುಣ ಮತ್ತು ಇದು ಮನಸ್ಸನ್ನು ಬಹುಬೇಗ ಕೆಡಿಸಿ, ದುರ್ವರ್ತನೆಗೆ ಕಾರಣವಾಗುತ್ತದೆ. ದುರಾಸೆ ವಿನಾಶಕಾರಿ. ದುರಾಸೆಯನ್ನು ಹೊತ್ತ ಮನಸ್ಸನ್ನು ನಿಯಂತ್ರಿಸುವುದೂ ಕಷ್ಟ. ಹಾಗಾಗಿ ಎಲ್ಲ ಅಪಾಯಗಳಿಗೆ ಈ ದುರಾಸೆ ಮೊದಲ ಕಾರಣ. ಪಾತಕಗಳಿಗಿಂತಲೂ ಕೆಟ್ಟದ್ದು ಚಾಡಿಕೋರತನ. ವೈಷಮ್ಯಕ್ಕೆ ಮೂಲವೇ ಈ ಚಾಡಿಕೋರತನ. ಸತ್ಯವಿದ್ದ ಮೇಲೆ ತಪಸ್ಸು ಏತಕ್ಕೆ? ಎಂಬ ಮಾತು ಇಲ್ಲಿದೆ. ಸತ್ಯವೇ ದೇವರು ಮತ್ತು ಯಶಸ್ಸು. ಸತ್ಯದಿಂದ ಬದುಕುವವರಿಗೆ ತಪಸ್ಸಿನ ಅಗತ್ಯವಿಲ್ಲ; ಸತ್ಯದ ಬದುಕೇ ಒಂದು ಬಗೆಯ ತಪಸ್ಸು. ಮನಸ್ಸು ಶುದ್ಧವಾಗಲೆಂದು, ಪಾಪಕರ್ಮಗಳು ನಾಶವಾಗಲೆಂದು ಮಾಡುವ ತೀರ್ಥಯಾತ್ರೆ ನಿಷ್ಕಲ್ಮಶವಾದ ಮನಸ್ಸು ಇದ್ದವರಿಗೆ ಬೇಡವೇ ಬೇಡ. ಸೌಜನ್ಯವು ಎಲ್ಲರನ್ನೂ ಒಗ್ಗೂಡಿಸುವಂತದ್ದು ಮತ್ತು ಅಂದದ ಬದುಕಿಗೆ ಚಂದದ ಸೂತ್ರ. ಹಾಗಾಗಿ ಸೌಜನ್ಯವುಳ್ಳವನಿಗೆ ಸ್ವಜನರು ಅಂತ ಬೇರೆ ಬೇಕಿಲ್ಲ ಎನ್ನುತ್ತದೆ ನೀತಿಶತಕ. ನಿಜವಾದ ಮಹಿಮೆಯಿದ್ದ ಮೇಲೆ ಒಡವೆಗಳೇಕೆ? ಒಳ್ಳೆಯ ವಿದ್ಯೆ ಇದ್ದ ಮೇಲೆ ಹಣ ಏತಕ್ಕೆ? ಅಪಕೀರ್ತಿಯಿದ್ದ ಮೇಲೆ ಮೃತ್ಯು ಏತಕ್ಕೆ? ಎಂದು ಕೇಳುತ್ತದೆ ನೀತಿಶತಕ.

ದುರಾಸೆ ಮತ್ತು ಚಾಡಿಕೋರತನದಿಂದ ದೂರವಿದ್ದರೆ ಬದುಕು ಸುಖಮಯ. ಸತ್ಯಕ್ಕೆ ಯಾವತ್ತೂ ಜಯ ಎಂಬುದು ತಿಳಿದೇ ಇರುವ ಸಂಗತಿ. ಮನಸ್ಸೇ ಒಳಿತಿಗೂ ಕೆಡುಕಿಗೂ ಮೂಲ ಕಾರಣವಾಗಿರುವುದರಿಂದ ಕಲ್ಮಶವಿಲ್ಲದ ಮನಸ್ಸು ಸದಾ ಒಳ್ಳೆಯದನ್ನೇ ಮಾಡುವುದರಿಂದ ತೀರ್ಥಯಾತ್ರೆಯ ಅಗತ್ಯವಿಲ್ಲ. ಅಶುದ್ಧ ಮನಸ್ಸಿನಿಂದ ಯಾವ ಯಾತ್ರೆಯನ್ನು ಮಾಡಿದರೂ ಫಲವಿಲ್ಲ. ವಿದ್ಯೆ ಬದುಕನ್ನು ಕಟ್ಟಿಕೊಟ್ಟರೆ ಅಪಕೀರ್ತಿ ಬದುಕನ್ನು ಹಂತಹಂತವಾಗಿ ಸಾಯಿಸುತ್ತದೆ. ನೀತಿಶತಕ ಹೇಳಿದ ಈ ನೀತಿಯ ಮಾತುಗಳನ್ನು ಪಾಲಿಸಿದರೆ ಭೂಲೋಕವೇ ಸ್ವರ್ಗವಾಗುವುದು.

ವಿಷ್ಣು ಭಟ್ ಹೊಸ್ಮನೆ

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here