Home ಧಾರ್ಮಿಕ ಸುದ್ದಿ ನೀಲಿ ಶ್ರೀ ವಿಷ್ಣುಮೂರ್ತಿ ಕೊಡಮಣಿತ್ತಾಯ ದೈವಸ್ಥಾನ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ನೇಮಕ್ಕೆ ಚಾಲನೆ

ನೀಲಿ ಶ್ರೀ ವಿಷ್ಣುಮೂರ್ತಿ ಕೊಡಮಣಿತ್ತಾಯ ದೈವಸ್ಥಾನ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ನೇಮಕ್ಕೆ ಚಾಲನೆ

1051
0
SHARE

ಪುಂಜಾಲಕಟ್ಟೆ : ವಾಮದ ಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ನೀಲಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಶ್ರೀ ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಮತ್ತು ಕಲ್ಕುಡ-ಕಲ್ಲುರ್ಟಿ ದೈವಗಳ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ನೇಮಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಪೆಜಕ್ಕಳ ಗಂಗಾಧರ ಕಕೃಣ್ಣಾಯ ಅವರ ನೇತೃತ್ವದಲ್ಲಿ ಹಾಗೂ ಪೆಜಕ್ಕಳ ರಾಧಾಕೃಷ್ಣ ಕಕೃಣ್ಣಾಯ ಅವರ ಸಹಕಾರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಶನಿವಾರ ಬೆಳಗ್ಗೆ ಮುಹೂರ್ತ, ಸಂಜೆ ಋತ್ವಿಜರ ಆಗಮನ, ದೇವರ ಪ್ರಾರ್ಥನೆ, ತೋರಣ ಮುಹೂರ್ತ, ವಾಸ್ತು ಬಲಿ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ದಿಕ್ಪಾಲಕ ಬಲಿ, ಆದಿವಾಸ ಪೂಜೆ ನಡೆಯಿತು.

ರವಿವಾರ ಬೆಳಗ್ಗೆ ಪುಣ್ಯಾಹವಾಚನ, ಗಣಪತಿ ಹೋಮ, ನವಗ್ರಹ ಹೋಮ, ಕಲಶ ಪೂಜೆ, ಪ್ರಧಾನ ಹೋಮ, ಅಜ್ಜಿ ಬೆಟ್ಟು ಗುತ್ತಿನಿಂದ ದೈವಗಳ ಭಂಡಾರ ಆಗಮನ, ಪಂಚಾಮೃತ ಅಭಿಷೇಕ, ಶ್ರೀ ಕೊಡ ಮಣಿತ್ತಾಯ ದೈವಕ್ಕೆ ಬ್ರಹ್ಮಕಲಶಾಭಿಷೇಕ, ದೈವ ಮೈಸಾಂದಾಯನಿಗೆ ನವಕ ಕಲಶ, ಪ್ರಧಾನ ಹೋಮ, ಕಲಶಾಭಿಷೇಕ ಪರ್ವಪೂಜೆ, ಮಧ್ಯಾಹ್ನ ಶ್ರೀ ಕೊಡಮಣಿತ್ತಾಯ ದೈವಕ್ಕೆ ದರ್ಶನ ಸೇವೆ, ಸಂಜೆ ಧ್ವಜಾರೋಹಣ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಾಬು ರಾಜೇಂದ್ರ
ಶೆಟ್ಟಿ, ಕಾರ್ಯದರ್ಶಿ ಪ್ರವೀಣ್‌ ಗಟ್ಟಿ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಉದ್ಯಮಿ ವಿನಾಯಕ ಪ್ರಭು
ಆಲದಪದವು,ಗೌರವ ಸಲಹೆಗಾರರಾದ ರಘುನಾಥ ಪೈ ಮಾವಿನಕಟ್ಟೆ, ಯುವರಾಜ ಆಳ್ವ, ಅಧ್ಯಕ್ಷ ನವೀನಚಂದ್ರ ಶೆಟ್ಟಿ, ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಉತ್ಸವ ಸಮಿತಿ ಗೌರವಾಧ್ಯಕ್ಷ ವೀರಪ್ಪ ಶೆಟ್ಟಿ ಕಂಚಾರು, ಅಧ್ಯಕ್ಷ ಕಾಂತಪ್ಪ ಶೆಟ್ಟಿ ಪಡೊಟ್ಟು , ಕಾರ್ಯದರ್ಶಿ ಮಾಧವ ಪೂಜಾರಿ ಕುಲ್ಲಾಲ್‌, ವ್ಯವಸ್ಥಾಪನ ಸಮಿತಿ ಸದಸ್ಯರಾದ ಯೋಗೀಶ್‌ ಪ್ರಭು ಆಲದಪದವು, ಉಮೇಶ್‌ ಕೋಟ್ಯಾನ್‌ ಪಿಲಿಮೊಗರು, ಉಷಾ ಇಂದುಶೇಖರ್‌ ಚೆನ್ನೈತ್ತೋಡಿ, ಕೃಷ್ಣ ಶೆಟ್ಟಿ ದಾರಂಪಾಲು, ಕೃಷ್ಣ ನಾಯಕ್‌ ಬಸ್ತಿಕೋಡಿ, ನಳಿನಿ ಆನಂದ ಮೂಲ್ಯ ಪಚ್ಚೇರು ಸಮಿತಿಗಳ ಪದಾಧಿಕಾರಿ, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here