ಬ್ರಹ್ಮಾವರ : ಬೇರೆ ಎಲ್ಲ ದಾನಗಳಿಗಿಂತ ಬಡವ ಬಲ್ಲಿದ ಎನ್ನದೇ ಹಸಿದವರಿಗೆ ಅನ್ನದಾನ ಮಾಡುವುದೇ ಶ್ರೇಷ್ಠ ದಾನ ಎಂದು ಉಡುಪಿ ಕಾಣಿಯೂರು ಮಠಾಧೀಶ ಶ್ರೀ ವಿದಾವಲ್ಲಭ
ಶ್ರೀಪಾದರು ಹೇಳಿದರು.
ಅವರು ಸೋಮವಾರ ನೀಲಾವರ ಶ್ರೀ ಮಹಿಷಮರ್ದಿನಿ ದೇಗುಲದ ವಠಾರದಲ್ಲಿ ಸುಮಾರು 1.35 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲ್ಪಡುವ ಭೋಜನ ಶಾಲೆಗೆ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.
ಕರಾವಳಿ ಜಿಲ್ಲೆಯ ದೇವಳಗಳಲ್ಲಿ ಅನ್ನದಾನದಂತಹ ಸೇವೆಗಳನ್ನು ಭಕ್ತಿಯಿಂದ ಸದಾ ಮಾಡುತ್ತಿರುವ ಫಲದಿಂದ ಕರಾವಳಿಯಲ್ಲಿ ಯಾವುದೇ ರೀತಿಯ ಪ್ರಕೃತಿ ವಿಕೋಪಗಳಂತಹ ಅನಾಹುತಗಳಿಂದ ಭಗವಂತನ ರಕ್ಷಣೆ ಸದಾ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ರಘುರಾಮ ಮಧ್ಯಸ್ಥ, ದೇವಳದ ಕಾರ್ಯನಿರ್ವಹಣಾಧಿಕಾರಿ ಟಿ.ಜಿ ಸುಧಾಕರ್, ಜಿಲ್ಲಾ ಕೆ.ಡಿ.ಪಿ. ಸದಸ್ಯ ಉಮೇಶ್ ನಾಯ್ಕ, ಎಂಜಿನಿಯರ್ ಶ್ರೀಕಾಂತ ಆಚಾರ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ರಮೇಶ್ ಪೂಜಾರಿ, ರಮೇಶ್ ನಾಯ್ಕ, ಸದಾಶಿವ ದೇವಾಡಿಗ, ಸುರೇಂದ್ರ ಸುವರ್ಣ, ಹೇಮಾ.ವಿ.ಬಾಸ್ರಿ, ಮಲ್ಲಿಕಾ ಶೆಟ್ಟಿ, ಅರ್ಚಕರಾದ ರಾಘವೇಂದ್ರ ಅಡಿಗ, ಚಂದ್ರಶೇಖರ ಅಡಿಗ, ನೀಲಾವರ ಗ್ರಾ.ಪಂ ಅಧ್ಯಕ್ಷೆ ಆಶಾ ಕೋಟ್ಯಾನ್, ಗುತ್ತಿಗೆದಾರ ಗುರುರಾಜ್ ರಾವ್ ಆರೂರು, ಅರ್ಚಕ ವೃಂದ, ಸಿಬಂದಿ, ಭಕ್ತಾದಿಗಳು ಉಪಸ್ಥಿತರಿದ್ದರು. ಉಮೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.