ಬಂಟ್ವಾಳ: ನಾವೂರು ಗ್ರಾಮ ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಪ್ರಯುಕ್ತ ಶ್ರೀ ದೇವರ ನಿಧಿಕುಂಬಾದಿ ಷಡಾಧಾರ ಪ್ರತಿಷ್ಠೆ ನಡ್ವಂತಾಡಿ ಶ್ರೀಪಾದ ಪಾಂಗಾಣ್ಣಾಯ ತಂತ್ರಿ ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಕಾರ್ಯಕ್ರಮದ ಪ್ರಯುಕ್ತ ಮಹಾಗಣಪತಿ ಹೋಮ, ನಿಧಿ ಕುಂಭ ಪೂರಣೆ, ಷಡಾಧಾರ ಪ್ರತಿಷ್ಠೆ ಪ್ರಸನ್ನ ಪೂಜೆ, ಸಂಜೆ ಇಷ್ಟಿಕಾನ್ಯಾಸ ಕಲಶಾಭಿಷೇಕ, ಗರ್ಭನ್ಯಾಸ ಪ್ರಸನ್ನ ಪೂಜೆಯು ನಡೆಯಿತು.ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಎ. ಗೋವಿಂದ ಪ್ರಭು, ಉದ್ಯಮಿ ಉದಯ ಕುಮಾರ್ ರಾವ್ ಕ್ಷೇತ್ರಕ್ಕೆ ಭೇಟಿ ನೀಡಿದರು. ವರದರಾಜ್, ನಾರಾಯಣ ರಾವ್ ಸಹಿತ ನೂರಾರು ಮಂದಿ ಉಪಸ್ಥಿತರಿದ್ದರು.