ಕಾಣಿಯೂರು: ಬೊಬ್ಬೇಕೇರಿ ಸಮೀಪದ ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ನಿಧಿಕುಂಭ ಸಮರ್ಪಣೆ ರವಿವಾರ ನಡೆಯಿತು.
ಅರ್ಚಕ ಶಿವಶಂಕರ್ ಭಟ್ ವಿಧಿ-ವಿಧಾನ ನೆರವೇರಿಸಿದರು. ದೇವಸ್ಥಾನದ ಆನುವಂಶೀಯ ಮೊಕ್ತೇಸರ ಹರಿಯಪ್ಪ ಗವಡ ನಾವೂರು, ಆಡಳಿತ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಪೈಕ, ಕಾರ್ಯದರ್ಶಿ ಪುನೀತ್ ಕೆ.ಜೆ., ಜತೆ ಕಾರ್ಯದರ್ಶಿ ಚೇತನ್ ನಾವೂರು, ಮೊಕ್ತೇಸರರಾದ ಬಾಲಕೃಷ್ಣ ರೈ ಕುಂಡುಳಿ, ನಾಗೇಶ್ ರೈ ಮಾಳ, ಕೃಷ್ಣಪ್ಪ ಗೌಡ ಬಿರ್ನೆಲು, ಆಡಳಿತ ಸಮಿತಿ ಉಪಾಧ್ಯಕ್ಷ ಅನಂತ್ ಬೈಲಂಗಡಿ, ವಿಶ್ವನಾಥ ರೈ ಮಾಳ, ಕೋಶಾಧಿಕಾರಿ ಶಿವಾನಂದ ಟಿ. ಪುಣcತ್ತಾರು, ಸದಸ್ಯರಾದ ಪ್ರದೀಪ್ ಬೊಬ್ಬೆಕೇರಿ, ಹರೀಶ್ ಪೈಕ, ಕುಸುಮಾಧರ ಗೌಡ ಕೇಪುಳಗುಡ್ಡೆ, ಚೆನ್ನಕೇಶವ ಬೇಂಗಡ್ಕ, ದಿನೇಶ್ ಮಾಳ, ದಯಾನಂದ ಬೀರುಕುಡಿಕೆ, ರಾಮಣ್ಣ ಗೌಡ ಮೂಡೈಮಜಲು, ವಿಟಲ ಗೌಡ ನಿಡ್ಡಾಜೆ, ಸುಂದರ ನಾಯ್ಕ ಉಪ್ಪಡ್ಕ, ಯೋಗೀಶ್ ಆಚಾರ್ಯ ಅಬ್ಬಡ, ನಾವೂರು ಸುಬ್ರಹ್ಮಣ್ಯ ಭಜನ ಮಂಡಳಿಯ ಅಧ್ಯಕ್ಷ ಪ್ರವೀಣಚಂದ್ರ ರೈ ಕುಮೇರು, ಕಾರ್ಯದರ್ಶಿ ರಾಜೇಶ್ ನಾವೂರು, ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.