Home ಧಾರ್ಮಿಕ ಸುದ್ದಿ ನವರಾತ್ರಿ ಉತ್ಸವ: ಶ್ರೀ ದೇವಿಗೆ ವಿಶೇಷ ಅಲಂಕಾರ

ನವರಾತ್ರಿ ಉತ್ಸವ: ಶ್ರೀ ದೇವಿಗೆ ವಿಶೇಷ ಅಲಂಕಾರ

1087
0
SHARE

ಮಹಾನಗರ : ನವರಾತ್ರಿ ಉತ್ಸವದ ಎರಡನೇ ದಿನವಾದ ಗುರುವಾರವೂ ನಗರದ ವಿವಿಧ ದೇವ ಸ್ಥಾನಗಳಲ್ಲಿ ಪೂಜೆ, ಪುನಸ್ಕಾರಾದಿಗಳು ನಡೆದವು. ಸಾವಿರಾರು ಮಂದಿ ಭಕ್ತರು ದೇವಸ್ಥಾನಗಳಿಗೆ ಆಗಮಿಸಿ, ದೇವರ ದರ್ಶನ ಪಡೆದರು.

ಮಂಗಳೂರು ದಸರಾವೆಂದೇ ಖ್ಯಾತಿ ಪಡೆದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬೆಳಗ್ಗೆ ದುರ್ಗಾಹೋಮ, ಪುಷ್ಪಾಲಂಕಾರ ಮಹಾಪೂಜೆ, ಭಜನ ಕಾರ್ಯ ಕ್ರಮ,
ಶ್ರೀದೇವಿ ಪುಷ್ಪಾಲಂಕಾರ ಮಹಾ ಪೂಜೆ, ಉತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೆಗಾ ಮ್ಯಾಜಿಕ್‌ ಸ್ಟಾರ್‌ ಕುದ್ರೋಳಿ ಗಣೇಶ್‌ ಮತ್ತು ಬಳಗದಿಂದ ವಿಸ್ಮಯ ಜಾದೂ ರೋಮಾಂಚಕ ಅದ್ಭುತ ಯಕ್ಷಿಣಿಗಳ ಮಾಯಾಲೋಕ’ ಜಾದೂ ಕಾರ್ಯಕ್ರಮ ನಡೆಯಿತು.

ನವದುರ್ಗೆಯರ ವೀಕ್ಷಣೆ ನವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ನವದುರ್ಗೆಯರ ಮತ್ತು ಶಾರದಾ ಮಾತೆಯ ವಿಗ್ರಹವನ್ನು ಕಣ್ತುಂಬಿಕೊಳ್ಳಲು ಊರು, ಪರವೂರಿನ ಭಕ್ತರು ಗುರುವಾರ ಬೆಳಗ್ಗೆಯಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಸಂಜೆ ಹೊತ್ತಿನಲ್ಲಿ ದೇಗುಲದ ಮತ್ತು ಸುತ್ತಮುತ್ತ ಅಳವಡಿಸಲಾಗಿರುವ ಲೈಟಿಂಗ್ಸ್‌ನ ಸೌಂದರ್ಯದ ವೀಕ್ಷಣೆ ಗೆಂದೇ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಕಂಡುಬಂತು.

ಮಂಗಳಾದೇವಿಯಲ್ಲಿಯೂ ಭಕ್ತ ಸಮೂಹ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿಯೂ ಗುರುವಾರ ನವರಾತ್ರಿ ಉತ್ಸವದ ಸಲುವಾಗಿ ಭಕ್ತರು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದರು. ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. ದೇವರಿಗೆ ವಿವಿಧ ಪೂಜೆ ಪುನಸ್ಕಾರಾದಿಗಳು ನಡೆದವು. ಸಂಜೆ ಹಳೆಕೋಟೆ ಬೋಳಾರ ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನದ ಮಹಿಳಾ ಭಜನ ಮಂಡಳಿಯಿಂದ ಭಜನೆ, ಬಳಿಕ ಜಾನಿR ಡಿ.ವಿ. ಅವರಿಂದ ನೃತ್ಯ ವೈಭವ, ಪ್ರೊ| ಶಂಕರ್‌ ಮತ್ತು ಶಂಕರ್‌ ಜೂನಿಯರ್‌ ಇವರಿಂದ ಗಿಲಿ ಗಿಲಿ ಮ್ಯಾಜಿಕ್‌ ಕಾರ್ಯಕ್ರಮ ಜರಗಿತು.

ಇಂದಿನ ಕಾರ್ಯಕ್ರಮ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ. 12ರಂದು ಬೆಳಗ್ಗೆ 10ಕ್ಕೆ ಆರ್ಯ ದುರ್ಗಾ ಹೋಮ, ಮಧ್ಯಾಹ್ನ 12.30ಕ್ಕೆ ಪುಷ್ಪಾಲಂಕಾರ ಪೂಜೆ, ರಾತ್ರಿ 7ಕ್ಕೆ ಭಜನೆ, 9ಕ್ಕೆ ಶ್ರೀ
ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾಜ್ಯ ಪ್ರಶಸ್ತಿ ವಿಜೇತ ಕಲಾಕುಂಭ ಸಾಂಸ್ಕೃತಿಕ ವೇದಿಕೆ ವತಿಯಿಂದ “ತುಳುನಾಡ ಸತ್ಯೊಲು’ ನೃತ್ಯ ರೂಪಕ ನಡೆಯಲಿದೆ.

ಮಂಗಳಾದೇವಿ ದೇವಸ್ಥಾನದಲ್ಲಿ
ವಿವಿಧ ಪೂಜೆಗಳೊಂದಿಗೆ ಸಂಜೆ 4ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಂಗಳಾದೇವಿ ಸುಮನಾ ಕೇಂದ್ರ ಮಾತೃಮಂಡಳಿ ವತಿಯಿಂದ ಭಜನೆ, 5ರಿಂದ ದಿವಾಣ ಕೇಶವ ಭಟ್‌ ಮತ್ತು ಮಹಾಲಿಂಗೇಶ್ವರ ಭಟ್‌ ಅವರಿಂದ ಆರ್ಷಜ್ಞಾನ-ಆಚಾರ-ವಿಚಾರಗಳ ಬಗ್ಗೆ ಸಂವಾದ, ಬಳಿಕ ಪೂಜಾ ಉಪಾಧ್ಯಾ ಅವರಿಂದ ಭರತನಾಟ್ಯ, ರಾತ್ರಿ 7ರಿಂದ ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್‌ ಅವರ ಶಿಷ್ಯವೃಂದದಿಂದ ನೃತ್ಯ ವೈಭವ, ಬಳಿಕ ಎಂಜಿಟಿ ಸುವರ್ಣ ಮಹೋತ್ಸವದ ಪ್ರಯುಕ್ತ ಸಭಾ ಕಾರ್ಯಕ್ರಮ ಜರಗಲಿದೆ.

LEAVE A REPLY

Please enter your comment!
Please enter your name here